Home ಟಾಪ್ ಸುದ್ದಿಗಳು ಬೀದಿ ಬದಿ ವ್ಯಾಪಾರಿಗಳ ಮೇಲೆ ಇಲ್ಲಸಲ್ಲದ ಕೇಸ್ ಹಾಕಿ ಬಂಧಿಸಿದರೆ ಬೃಹತ್ ಹೋರಾಟ: ಡಾ. ಸಿ...

ಬೀದಿ ಬದಿ ವ್ಯಾಪಾರಿಗಳ ಮೇಲೆ ಇಲ್ಲಸಲ್ಲದ ಕೇಸ್ ಹಾಕಿ ಬಂಧಿಸಿದರೆ ಬೃಹತ್ ಹೋರಾಟ: ಡಾ. ಸಿ ಈ ರಂಗಸ್ವಾಮಿ

ಕರ್ನಾಟಕ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳ ಮೇಲೆ ನಿಜವಾದ ಹೋರಾಟಗಾರರ ಮೇಲೆ ಇಲ್ಲಸಲ್ಲದ ಕೇಸ್ ಹಾಕಿ ಅರೆಸ್ಟ್ ಮಾಡಿದರೆ. ಇನ್ನು ಮುಂದೆ ಬೃಹತ್ ಮಟ್ಟದಲ್ಲಿ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಸಿ ಈ ರಂಗಸ್ವಾಮಿ ಎಚ್ಚರಿಕೆ ನಿಡಿದ್ದಾರೆ.

ಸಾಗರ ನಗರ ಸಭೆಯಲ್ಲಿ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಿ ಮುಖಂಡರಾಗಿರುವ ಜಿಲಾನಿ  ರವರ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈಗಾಗಲೇ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಮಣಿಗೌಡರವರು ಸಂಪರ್ಕ ಮಾಡಿ ವಕೀಲರ ಮುಖಾಂತರ ಜಾಮೀನು ಕೊಡಿಸುವುದಕ್ಕೆ ತಯಾರಾಗಿದ್ದಾರೆ. ಇದೇ ತರ ಬೀದಿ ಬದಿ ವ್ಯಾಪಾರಿಗಳಾದ ಅಮಾಯಕರ ಮೇಲೆ ಅಲ್ಪಸಂಖ್ಯಾತರ ಮುಖಂಡರ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿದ್ರೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಜವಾದ ಹೋರಾಟಗಾರರ ಮೇಲೆ ಕೇಸ್ ಹಾಕಿರುವುದು ಯಾವ ನ್ಯಾಯ? ಅಲ್ಲಿನ ನಗರ ಸಭೆ ಮುಖ್ಯಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಇದೇ ತರ ಮಾಡಿದರೆ ನಿಮ್ಮ ಕಚೇರಿ ಮುಂದೆ ಬೃಹತ್ ಮಟ್ಟದ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ರಂಗಸ್ವಾಮಿ ಹೇಳಿದ್ದಾರೆ.

Join Whatsapp
Exit mobile version