Home ಟಾಪ್ ಸುದ್ದಿಗಳು ಮಹಿಳೆಯ ಮೇಲೆ ಕುಸಿದು ಬಿತ್ತು ರಾಶಿ ರಾಶಿ ಅಕ್ಕಿ ಮೂಟೆ: ಪ್ರಾಣ ರಕ್ಷಿಸಿದ ಕೆಲಸಗಾರರು

ಮಹಿಳೆಯ ಮೇಲೆ ಕುಸಿದು ಬಿತ್ತು ರಾಶಿ ರಾಶಿ ಅಕ್ಕಿ ಮೂಟೆ: ಪ್ರಾಣ ರಕ್ಷಿಸಿದ ಕೆಲಸಗಾರರು

ಮುಂಬೈ: ಗೋಡೌನ್ ಒಂದರಲ್ಲಿ ಮಹಿಳೆಯೊಬ್ಬರು ಕಸ ಗುಡಿಸುತ್ತಿದ್ದ ವೇಳೆ ಅವರ ಮೇಲೆ ಅಕ್ಕಿ ಮೂಟೆಗಳು ಕುಸಿದು ಬಿದ್ದಿವೆ. ಆ ಸಂದರ್ಭದಲ್ಲಿ ಅಲ್ಲಿದ್ದ ಇತರೆ ಕೆಲಸಗಾರರು ತಮ್ಮ ಸಮಯ ಪ್ರಜ್ಞೆಯಿಂದ ಮಹಿಳೆಯ ಪ್ರಾಣವನ್ನು ರಕ್ಷಿಸಿದ್ದಾರೆ.


ಈ ಘಟನೆ ನವಿ ಮುಂಬೈನ ವಾಶಿ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.


ಗೋಡೌನ್ ಒಂದರಲ್ಲಿ ಕಸ ಗುಡಿಸುತ್ತಿದ್ದಂತ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ಅಕ್ಕಿ ಮೂಟೆಗಳು ಬಿದ್ದಿವೆ. ಆ ತಕ್ಷಣ ಅಲ್ಲಿದ್ದ ಇತರೆ ಕೆಲಸಗಾರರು ತಮ್ಮ ದಿಢೀರ್ ಕಾರ್ಯಾಚರಣೆಯಿಂದ ಅಕ್ಕಿ ಮೂಟೆಗಳ ಅಡಿಯಲ್ಲಿ ಸಿಲುಕಿಹಾಕಿಕೊಂಡ ಮಹಿಳೆಯನ್ನು ರಕ್ಷಿಸಿದ್ದಾರೆ.

Join Whatsapp
Exit mobile version