Home ಟಾಪ್ ಸುದ್ದಿಗಳು ಬೈಕ್ ಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಕಾರು: ಅದೃಷ್ಟವಶಾತ್ ಪಾರು

ಬೈಕ್ ಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಕಾರು: ಅದೃಷ್ಟವಶಾತ್ ಪಾರು

ಚಿಕ್ಕಮಗಳೂರು: ರಿಟ್ಜ್ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿ ಉರುಳಿ ಬಿದ್ದಿರುವ ಘಟನೆ ಕೊಪ್ಪ ತಾಲೂಕಿನ ಶಾಂತಿಪುರ ಬಳಿ ಶುಕ್ರವಾರ ನಡೆದಿದೆ.

ರಾಜ್ಯ ಹೆದ್ದಾರಿ 27ರಲ್ಲಿ ಈ ಘಟನೆ ನಡೆದಿದೆ. ಪಲ್ಸರ್ ಬೈಕ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ನುಗ್ಗಿದ ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿದಿದ್ದು, ಸ್ವಲ್ಪದರಲ್ಲೇ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಒಂದು ಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ.

ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version