ಸೊಲ್ಹಾಪುರ: ಸಿಗ್ನಲ್‌ನಲ್ಲಿ ಕ್ರಾಸಿಂಗ್ ವೇಳೆ ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ 4ಕ್ಕೂ ಹೆಚ್ಚು ದ್ಚಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಡಿಕ್ಕಿಗೊಳಗಾದ ವಾಹನಗಳು ದೂರಕ್ಕೆ ಚಿಮ್ಮಿ ಬಿದ್ದಿವೆ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದ ಸೈಬರ್ ಚೌಕ್‌ನಲ್ಲಿ ನಡೆದಿದೆ.
ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಹೀಗೆ ವೇಗವಾಗಿ ಬಂದು ಮೂವರನ್ನು ಬಲಿ ಪಡೆದ ಬಿಳಿ ಬಣ್ಣದ ಕಾರನ್ನು 72 ವರ್ಷದ ವೃದ್ಧ ವಸಂತ್ ಚೌಹಾಣ್ ಎಂಬುವವರು ಚಲಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಾಹನ ದಟ್ಟಣೆಯಿಂದ ಕೂಡಿದ ಇಂಟರ್‌ಸೆಕ್ಷನ್ ಸಿಗ್ನಲ್‌ನಲ್ಲಿ ಕಾರು ಕಾರು ಚಾಲಕನಿಗೆ ಚಾಲನೆಯ ವೇಳೆಯೇ ತಲೆ ತಿರುಗಿದಂತಾಗಿದ್ದು, ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾಗುವಂತಹ ಯಾವುದಾದರೂ ವೈದ್ಯಕೀಯ ಹಿನ್ನೆಲೆಯನ್ನು 72 ವರ್ಷದ ಕಾರು ಚಾಲಕ ಚೌಹಾಣ್ ಹೊಂದಿದ್ದಾರೆಯೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.