Home ಟಾಪ್ ಸುದ್ದಿಗಳು ಗಾರ್ಮೆಂಟ್ ಶೋ ರೂಂನಲ್ಲಿ ಗಾಜಿನ ಬಾಗಿಲು ಬಿದ್ದು 3 ವರ್ಷದ ಮಗು ಸಾವು

ಗಾರ್ಮೆಂಟ್ ಶೋ ರೂಂನಲ್ಲಿ ಗಾಜಿನ ಬಾಗಿಲು ಬಿದ್ದು 3 ವರ್ಷದ ಮಗು ಸಾವು

ಆಘಾತಕಾರಿ ವಿಡಿಯೋ ವೈರಲ್

ಲೂಧಿಯಾನ: ಗಾರ್ಮೆಂಟ್‌ ಶೋರೂಮ್‌ನ ಗಾಜಿನ ಬಾಗಿಲು ಬಿದ್ದು 3 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ.

ಪೋಷಕರ ಬೇಜವಾಬ್ದಾರಿತನದಿಂದ ಇಂತಹ ಘಟನೆ ಸಂಭವಿಸುತ್ತದೆ ಎಂದು ನೆರೆದವರು ಮಾತಾಡಿಕೊಳ್ಳುತ್ತಿದ್ದಾರೆ. ಪೋಷಕರಿಂದ ಬೇರೆಯಾಗಿ ಮಗು ಗಾಜಿನ ಬಳಿ ಆಟವಾಡುತ್ತಿದ್ದಾಗ ಗಾಜಿನ ಬಾಗಿಲು ಬಿದ್ದು ಮೃತಪಟ್ಟಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.

ಮಗು ಬಾಗಿಲಿನ ಹ್ಯಾಂಡಲ್ ಹಿಡಿದು ಆಟವಾಡುತ್ತಿದ್ದ ವೇಳೆ, ಬಾಗಿಲು ಅವಳ ಮೇಲೆ ಬಿದ್ದಿದೆ. ಕೂಡಲೇ ಅವಳನ್ನು ಅಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ಯಲಾದರೂ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

https://twitter.com/i/status/1729369699602018517
Join Whatsapp
Exit mobile version