ತನ್ನ ಹುಟ್ಟುಹಬ್ಬಕ್ಕೆ ತಂದ ಕೇಕ್​ ಸೇವಿಸಿ 10 ವರ್ಷದ ಬಾಲಕಿ ಸಾವು

Prasthutha|

ಪಟಿಯಾಲ: ತನ್ನ ಹುಟ್ಟುಹಬ್ಬಕ್ಕೆ ತಂದ ಕೇಕ್​ ಸೇವಿಸಿ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಂಜಾಬ್​ನ ಪಟಿಯಾಲದಲ್ಲಿ ನಡೆದಿದೆ.

- Advertisement -

ಮಾನ್ವಿ ಮೃತಪಟ್ಟ ಬಾಲಕಿ. ಹುಟ್ಟುಹಬ್ಬದ ಕೇಕ್ ತಿಂದ ಸೇವಿಸಿದ ಕುಟುಂಬಸ್ಥರಿಗೆ ಹಾಗೂ ಬಾಲಕಿಕೆ ವಾಕರಿಕೆ ಹಾಗೂ ವಾಂತಿಯಾಗಿದೆ. ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಹುಟ್ಟು ಹಬ್ಬದ ಸಂಭ್ರದಲ್ಲಿರಬೇಕಾದ 10 ವರ್ಷದ ಬಾಲಕಿ ಮಾನ್ವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪೋಷಕರು ಪಂಜಾಬ್​ನ ಪಟಿಯಾಲದಲ್ಲಿರುವ ಬೇಕರಿಯೊಂದರಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಕೇಕ್ ತರಿಸಿದ್ದರು.

- Advertisement -

ತಮ್ಮ ಮಗಳ ಸಾವಿಗೆ ಕೇಕ್ ಕಾರಣ ಎಂದು ಹೇಳಿರುವ ಕುಟುಂಬವು ಬೇಕರಿ ಮತ್ತು ಅದು ಮಾರಾಟ ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.

ಫುಡ್​ ಪಾಯ್ಸನ್​ ನಿಂದಾಗಿ ಈ ದಾರುಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್​ 273,304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.



Join Whatsapp