ನಮ್ಮ ಬಗ್ಗೆ

ಮಾಧ್ಯಮ ಜಗತ್ತಿಗೆ ಸ್ತುತಿ ಪಬ್ಲಿಕೇಶನ್ ಆ್ಯಂಡ್ ಇನ್‍ಫಾರ್ಮೇಷನ್ ಟ್ರಸ್ಟ್ (ರಿ)ನ ಕೊಡುಗೆಯಾಗಿ`ಪ್ರಸ್ತುತ’ ಮಾಸಿಕ ಪತ್ರಿಕೆಯು 2007ರಲ್ಲಿ ಸ್ಥಾಪನೆಯಾಯಿತು. ಪತ್ರಿಕೆಯಲ್ಲಿ ಮೂಡಿ ಬಂದ ಸತ್ಯಸುದ್ದಿಯ ವಸ್ತುನಿಷ್ಠ ಲೇಖನಗಳು, ವರದಿಗಳು ಬೇಗನೇ ಓದುಗರ ಮನಗೆದ್ದಿತು. ಓದುಗರ ಬೇಡಿಕೆಯು ಹೆಚ್ಚಿದಂತೆ 2010ರಲ್ಲಿ `ಪ್ರಸ್ತುತ’ವನ್ನು ಪಾಕ್ಷಿಕವಾಗಿ ಹೊರತರಲಾಯಿತು. ಆರಂಭದಿಂದಲೇ ಜನಪರಕಾಳಜಿಯುಳ್ಳ ಬರಹಗಳು ಮೂಡಿ ಬಂದದ್ದನ್ನು ಓದುಗರು ಗಮನಿಸಿದರು. ಅಂತೆಯೇ ಜಗತ್ತಿಗೆ ಬೆದರಿಕೆಯಾದ ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ, ಬಂಡವಾಳಶಾಹಿತ್ವದ ಕೆಡುಕುಗಳ ಕುರಿತು ಮತ್ತು ದೇಶಕ್ಕೆ ಕಂಟಕವಾಗಿರುವ ಕೋಮುವಾದ ಮತ್ತು ಪ್ರಭುತ್ವದ ಭಯೋತ್ಪಾದನೆಯ ವಿರುದ್ಧ ನಿರ್ಭೀತ ನಿಲುವನ್ನು ಪ್ರಸ್ತುತ ಪ್ರಕಟಿಸಿತು. ನಕ್ಸಲೀಸಂ ವಿರುದ್ಧದ ಹೋರಾಟದ ಹೆಸರಲ್ಲಿ ಪ್ರಭುತ್ವದಿಂದ ಆದಿವಾಸಿಗಳ ದಮನ, ಟೆರರಿಸಂ ಹೆಸರಿನಲ್ಲಿ ಅಮಾಯಕ ಮುಸ್ಲಿಮರ ಬಂಧನ, ಅಸಮಾನತೆ, ಬಡವರನ್ನು ಇನ್ನಷ್ಟು ಅಧಪತನಕ್ಕೆ ತಳ್ಳುತ್ತಿರುವ ಸರಕಾರದ ನೀತಿಗಳು, ಪಕ್ಷಭೇದ-ಜಾತಿ ಭೇದವಿಲ್ಲದೆ ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯದಲ್ಲಿ ನಡೆಯುವ ಭ್ರಷ್ಚಾಚಾರ ಹಗರಣಗಳು – ಇವೆಲ್ಲವನ್ನೂ ಪತ್ರಿಕೆಯು ಜನರ ಮುಂದೆ `ಪ್ರಸ್ತುತ’ಪಡಿಸುತ್ತಿದೆ. ಮುಗ್ಧ ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯ, ಭಯೋತ್ಪಾದನೆಯ ವಿರುದ್ಧವೆಂಬ ನೆಪದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ನಡೆಸುತ್ತಿರುವ ಆಕ್ರಮಣಗಳು, ಮಧ್ಯಪ್ರಾಚ್ಯ ರಾಜಕೀಯವನ್ನೊಳಗೊಂಡಂತೆ ಪತ್ರಿಕೆಯಲ್ಲಿ ಪ್ರಕಟವಾಗುವ ಅಂತಾರಾಷ್ಟ್ರೀಯ ಸುದ್ದಿಗಳು ಹಾಗೂ ವಿಶ್ಲೇಷಣೆಗಳು `ಪ್ರಸ್ತುತ’ ಓದುಗವೃಂದದ ಮನಸೂರೆಗೊಳಿಸಿದೆ. ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪತ್ರಿಕೆಯು ಓದುಗವೃಂದವನ್ನು ಸೃಷ್ಟಿಸಿಕೊಂಡಿದೆ. ಸೌದಿ ಅರೇಬಿಯಾ, ಬಹ್ರೈನ್, ಯು.ಎ.ಇ, ಕತಾರ್, ಒಮಾನ್, ಕುವೈತ್‍ಗಳನ್ನೊಳಗೊಂಡಂತೆ ಗಲ್ಫ್ ರಾಜ್ಯಗಳಲ್ಲಿ ಅತ್ಯಧಿಕ ಓದುಗರನ್ನೊಳಗೊಂಡ `ಕನ್ನಡ ಮ್ಯಾಗಝಿನ್’ ಎಂಬ ಹೆಗ್ಗಳಿಕೆ `ಪ್ರಸ್ತುತ’ಕ್ಕಿದೆ. 2012ರ ಜುಲೈ 19ರಿಂದ `ಪ್ರಸ್ತುತ’ ಪಾಕ್ಷಿಕವು ಅಂತರ್‍ಜಾಲದಲ್ಲಿ ಲಭ್ಯವಿರುತ್ತದೆ; ಈ ಹಿಂದಿನಿಂತೆ ಎಲ್ಲಾ ರೀತಿಯ ಓದುಗರ ಬೆಂಬಲ ಮತ್ತು ಸಹಕಾರಗಳನ್ನು ಪ್ರಸ್ತುತ ಬಳಗವು ಮುಂದೆಯೂ ನಿರೀಕ್ಷಿಸುತ್ತದೆ.
The wealthy man https://www.tech-wonders.com/2019/10/how-to-study-abroad-to-be-successful-and-adapt-to-changes.html never forgot the poverty whence he came.