ಲಿಖಿಂಪುರ ಖೇರಿ ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯು ಭಾರತದ ಪ್ರತಿಷ್ಠೆಗೆ ಕಳಂಕ: ವಿಮೆನ್ ಇಂಡಿಯಾ ಮೂವ್ಮೆಂಟ್

Prasthutha|

ನವದೆಹಲಿ: ಇತ್ತೀಚೆಗೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸೂಚ್ಯಂಕ ಏರುತ್ತಲೇ ಇದೆ. ಇಂದಿನ ರಾಜ್ಯ ಮತ್ತು ಕೇಂದ್ರಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿವೆಯೆಂಬ ಭಾವನೆಯು ಜನರಲ್ಲಿ, ಅದರಲ್ಲೂ ಮಹಿಳೆಯರಲ್ಲಿ ಬಲಗೊಳ್ಳುತ್ತಿರುವುದು ಸರಕಾರದ ಅಸಹಾಯಕತೆಯ ಸಂಕೇತ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮೀನ್ ಇಸ್ಲಾಂ ಹೇಳಿದ್ದಾರೆ.

- Advertisement -

ಇತ್ತೀಚೆಗೆ ಉತ್ತರಪದೇಶದ ಲಿಖೀಂಪುರ ಖೇರಿಯಲ್ಲಿ ನಡೆದ ಇಬ್ಬರು ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಮಾತಾಡಿದ ಅವರು, ಇಂತಹ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು , ಸರ್ಕಾರಗಳು ಶಾಂತಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲಗೊಂಡಿವೆ ಎಂಬುವುದನ್ನು ದೃಢಪಡಿಸುತ್ತದೆ ಎಂದು ಹೇಳಿದರು

ಕೇಂದ್ರ ಸರ್ಕಾರ ಪಾರ್ಲಿಮೆಂಟ್ ನಲ್ಲಿ ತನಗಿರುವ ನಿಚ್ಚಳ ಬಹುಮತದ ಬಗ್ಗೆ ಹೆಮ್ಮೆಯಿಂದಿರುವುದಲ್ಲದೆ, ಬಹುತೇಕ ರಾಜ್ಯ ಸರ್ಕಾರಗಳು ಅದರ ತೆಕ್ಕೆಯಲ್ಲಿದ್ದರೂ ಕಳೆದ ಏಳು ವರ್ಷಗಳಿಂದ ಜನರ ಸುರಕ್ಷತೆಗೆಂದು ಇರುವ ಕಾನೂನುಗಳ ಪಾಲನೆಯಲ್ಲಿ ಮತ್ತು ಮಹಿಳೆಯರ ಸುರಕ್ಷತೆಯ ಅನುಷ್ಠಾನದಲ್ಲಿ ವಿಫಲಗೊಂಡಿರುವುದು ದುರದೃಷ್ಟಕರ. ಇದು ಸರ್ಕಾರವು ಮಹಿಳೆಯರ ರಕ್ಷಣೆಗೆಂದು ಈಗಾಗಲೇ ರಚಿಸಿರುವ ಕಾನೂನುಗಳ ಪಾಲನೆಯ ಬಗ್ಗೆ ಅಗೌರವ, ಅವರ ಸುರಕ್ಷತೆಯ ಬಗ್ಗೆ ನಿರಾಸಕ್ತಿ ಮತ್ತು ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಬಗ್ಗೆ ಸರ್ಕಾರಗಳು ಹೊಂದಿರುವದನ್ನು ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಟೀಕಿಸಿದರು.

- Advertisement -

ಉತ್ತರ ಪ್ರದೇಶದ ಲಿಖಿಂಪುರ ಕೇರಿಯಲ್ಲಿ ನಡೆದ ಇಬ್ಬರು ಅಪ್ರಾಪ್ತ ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ ನಮ್ಮ ದೇಶದ ನಾಗರಿಕರು ತಲೆತಗ್ಗಿಸಬೇಕಾದ ಹೀನಾಯ ಕೃತ್ಯ ಮತ್ತು ಈ ಹೀನಾಯ ಅಪರಾಧ ಮತ್ತು ಭಾರತದ ಪ್ರತಿಷ್ಠೆಗೂ ಕಳಂಕ.ಈ ಘಟನೆಯು ಭಾರತೀಯ ಮಹಿಳಾ ಭದ್ರತೆಯ ವಿಷಯದಲ್ಲಿ ದೇಶದ ಆತ್ಮಸ್ಥೈರ್ಯವನ್ನೇ ಅಲುಗಾಡಿಸಿದೆ.ರಾಜ್ಯ ಮತ್ತು ಕೇಂದ್ರಸರ್ಕಾರಗಳು ಈ ಕ್ರೂರ ಅಪರಾಧಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದ ಸರ್ಕಾರ, ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಅತ್ಯಾಚಾರಿಗಳನ್ನು ಸೆರೆಮನೆಯಿಂದು ಬಿಡುಗಡೆಮಾಡಿಸಿ ಸಂಭ್ರಮಿಸುತ್ತಿರುವುದೇ ಮಹಿಳಾ ವಿರೋಧಿ ಅಪರಾಧಗಳ ಸೂಚ್ಯಂಕ ದಿನೇ ದಿನೇ ಏರುತ್ತಿರಲು ಮುಖ್ಯ ಕಾರಣ ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಖಂಡನೆ ವ್ಯಕ್ತಪಡಿಸಿದ ವಿಮೆನ್ ಇಂಡಿಯಾ ಮೂಮೆಂಟ್ , ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಘೋರವಾದ ಅಪರಾಧವಾಗಿದ್ದು ಈ ಕೃತ್ಯಕ್ಕೆ ಕಾರಣರಾಗಿರುವ ಯಾರೇ ಆದರೂ ಅವರನ್ನು ಬಂಧಿಸಿ ಕಠಿಣವಾಗಿ ಶಿಕ್ಷಿಸಬೇಕಾದ್ದು ಸರ್ಕಾರದ ಕರ್ತವ್ಯವೆಂದು ಹೇಳಿದೆ.



Join Whatsapp