ಸುರತ್ಕಲ್ ಮುಸ್ಲಿಮ್ ಐಕ್ಯತಾ ವೇದಿಕೆ ನಿಯೋಗದಿಂದ ಪ್ರಮುಖ ವಿರೋಧ ಪಕ್ಷ ನಾಯಕರ ಭೇಟಿ: ಮೃತ ಫಾಝಿಲ್, ಮಸೂದ್ ಬಗ್ಗೆ ಚರ್ಚೆ

Prasthutha|

ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಸುರತ್ಕಲ್ ನ ಫಾಝಿಲ್ ಮತ್ತು ಸುಳ್ಯದ ಮಸೂದ್ ವಿಷಯದಲ್ಲಿ ತಾರತಮ್ಯ ಪ್ರದರ್ಶಿಸಿದ ಸರಕಾರ ಬಗ್ಗೆ ಮತ್ತು ಸಂಬಂಧಿತ ಇತರ ವಿಷಯಗಳ ಬಗ್ಗೆ ಮುಸ್ಲಿಮ್ ಐಕ್ಯತಾ ವೇದಿಕೆ ಸುರತ್ಕಲ್ ನ ಮುಸ್ಲಿಮ್ ಐಕ್ಯತಾ ವೇದಿಕೆ ನಿಯೋಗವು ಪ್ರಮುಖ ವಿರೋಧ ಪಕ್ಷ ನಾಯಕರ ಭೇಟಿ ಮಾಡಿತು.

- Advertisement -

ಶಾಸಕ ಯು. ಟಿ.ಖಾದರ್ ನೇತೃತ್ವದಲ್ಲಿ ಕರ್ನಾಟಕ ಸರಕಾರದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರವರನ್ನು ಭೇಟಿ ಮಾಡಿ, ಸುರತ್ಕಲ್  ಫಾಝಿಲ್ ಮತ್ತು ಸುಳ್ಯದ ಮಸೂದ್ ಹತ್ಯಾ ಘಟನೆ ಮತ್ತು ನಂತರದ ಬೆಳೆವಣಿಗೆಗಳಲ್ಲಿ ಪ್ರಸ್ತುತ ಸರಕಾರ ಮತೀಯ ತಾರತಮ್ಯ ಪ್ರದರ್ಶಿಸಿದ ಬಗ್ಗೆ ಮತ್ತು ಘಟನೆಯನ್ನು ನಿರ್ಲಕ್ಷಿಸಿದ ಬಗ್ಗೆ ದ್ವನಿ  ಎತ್ತಲು ಮತ್ತು ನ್ಯಾಯ ಖಾತರಿ ಪಡಿಸಲು ಪ್ರಯತ್ನಿಸಲು ಕೋರಿ ವಿಸ್ತೃತ ಮನವಿ ಸಲ್ಲಿಸಿದರು.

ನಿಯೋಗದಲ್ಲಿ ಮುಸ್ಲಿಮ್ ಐಕ್ಯತಾ ವೇದಿಕೆ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಮೃತ ಫಾಝಿಲ್ ತಂದೆ ಉಮರ್ ಫಾರೂಕ್, ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಕೆ.ಅಶ್ರಫ್, ವೇದಿಕೆ ಸದಸ್ಯರಾದ  ಅಬೂಬಕ್ಕರ್ ಕುಳಾಯಿ,ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲಿಸಿ ಸದನದಲ್ಲಿ ದ್ವನಿ ಎತ್ತುವ ಬಗ್ಗೆ ಭರವಸೆ ನೀಡಿದರು. ಸಂತ್ರಸ್ತರಿಗೆ ತಮ್ಮ ಹಂತದಲ್ಲಿ ಸಾಧ್ಯವಾಗುವ ಸರ್ವ ನೆರವು ನೀಡುವ ಬಗ್ಗೆ ಯು.ಟಿ.ಖಾದರ್ ಕೂಡಾ ಈ ಸಂದರ್ಭದಲ್ಲಿ ಭರವಸೆ ನೀಡಿದರು.

- Advertisement -

ನಿಯೋಗವು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ. ಬಿ.ಕೆ.ಹರಿಪ್ರಸಾದ್,  ಜೇ.ಡಿ.ಎಸ್.ನಾಯಕರು ಮತ್ತು ಮಾಜಿ ಮುಖ್ಯ ಮಂತ್ರಿಗಳಾದ ಎಚ್.ಡಿ.ಕುಮಾರ ಸ್ವಾಮಿ, ಕೆ. ಪಿ. ಸಿ. ಸಿ ಅಧ್ಯಕ್ಷರಾದ ಡಿ. ಕೆ.ಶಿವಕುಮಾರ್, ಶಾಸಕರಾದ ಬಿ. ಎಂ.ಫಾರೂಕ್,ಶ್ರೀ ರಮೇಶ್ ಕುಮಾರ್, ಬಿ.ಝಡ್.ಝಮೀರ್ ಅಹ್ಮದ್ ಖಾನ್,  ಮತ್ತು ಪ್ರಿಯಾಂಕ ಖರ್ಗೆ ರವರನ್ನು ಭೇಟಿ ಮಾಡಿ ಈ ವಿಷಯದಲ್ಲಿ ಚರ್ಚೆ ಮಾಡಿತು.



Join Whatsapp