15 ಮಂದಿ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿಯಿಂದ ಏಕಲವ್ಯ ಪ್ರಶಸ್ತಿ ಪ್ರದಾನ

Prasthutha|

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಕೊಡಲ್ಪಡುವ ಅತ್ಯುನ್ನತ ಪ್ರಶಸ್ತಿಯನ್ನು ಈ ಬಾರಿ 15 ಮಂದಿ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.

- Advertisement -

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2020 ನೆ ಸಾಲಿನ ಏಕಲವ್ಯ , ಹಿರಿಯ ಕ್ರೀಡಾಪಟುಗಳು/ತರಬೇತುದಾರರಿಗೆ ಜೀವಮಾನ ಸಾಧನೆ , ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22 ನೆ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಏಕಲವ್ಯ ಪ್ರಶಸ್ತಿ

ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಏಕಲವ್ಯ ಪ್ರಶ್ತಸ್ತಿಗೆ ಈ ಬಾರಿ 151 ಕ್ರೀಡಾಪಟುಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಅಂತಿಮವಾಗಿ 15 ಮಂದಿಯನ್ನು ಆಯ್ಕೆ ಮಾಡಿ, ಪ್ರಶಸ್ತಿ ಪ್ರದಾನ ಮಾಡಲಾಯಿತು. ಏಕಲವ್ಯ ಕ್ರೀಡಾ ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆ ಜತೆಗೆ, 2 ಲಕ್ಷ ರುಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ
ಪ್ರಶಸ್ತಿ ವಿಜೇತರ ವಿವರ
ಅಥ್ಲೆಟಿಕ್ಸ್; ಜೀವನ್ ಕೆ.ಎಸ್
ಬ್ಯಾಡ್ಮಿಂಟನ್; ಅಶ್ವಿನಿ ಭಟ್
ಬ್ಯಾಸ್ಕೆಟ್ ಬಾಲ್; ಲೋಪಮುದ್ರಾ ತಿಮ್ಮಯ್ಯ
ಕ್ರಿಕೆಟ್; ಕರುಣ್ ನಾಯರ್
ಸೈಕ್ಲಿಂಗ್; ದಾನಮ್ಮ ಚಿಚಖಂಡಿ
ಜುಡೋ; ವಸುಂಧರಾ ಎಂ.ಎನ್.
ಕಬಡ್ಡಿ; ಪ್ರಶಾಂತ್ ಕುಮಾರ್ ರೈ
ಖೋ-ಖೋ; ಮುನೀರ್ ಬಾಷಾ
ನೆಟ್ ಬಾಲ್; ಜಿ ತರುಣ್ ಕೃಷ್ಣ ಪ್ರಸಾದ್

- Advertisement -

ಈಜು; ಲಿಖಿತ್ ಎಸ್.ಪಿ
ಟೇಬಲ್ ಟೆನ್ನಿಸ್; ಅನರ್ಘ್ಯ ಮಂಜುನಾಥ್
ವಾಲಿಬಾಲ್; ಅಶ್ವಲ್ ರೈ
ಹಾಕಿ; ಪ್ರಧಾನ್ ಸೋಮಣ್ಣ
ಪ್ಯಾರಾ ಅಥ್ಲೆಟಿಕ್ಸ್; ರಾಧಾ ವಿ
ಜೀವಮಾನ ಸಾಧನೆ
ಕ್ರೀಡಾಪಟುವಾಗಿ ಸಾಧನೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿಐದು ಮಂದಿಗೆ 2020ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕದ ಜೊತೆ ಒಂದು ಲಕ್ಷ ರುಪಾಯಿ ನಗದು ಬಹುಮಾನ ವಿತರಿಸಲಾಯಿತು.

ಅಥ್ಲೆಟಿಕ್ಸ್; ಗಾವಂಕರ್ ಜಿ.ವಿ,
ಕಯಾಕಿಂಗ್ & ಕನೋಯಿಂಗ್; ಕ್ಯಾಪ್ಟನ್ ದಿಲೀಪ್ ಕುಮಾರ್
ಯೋಗ; ಎಂ. ನಿರಂಜನ್ ಮೂರ್ತಿ
ಆಟ್ಯಾಪಾಟ್ಯಾ; ವೀರನಗೌಡ ಪಾಟೀಲ
ಕಬಡ್ಡಿ; ಎ. ನಾಗರಾಜ
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
ಗ್ರಾಮೀಣ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಾಧಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2014ರಿಂದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ 14 ಸಾಧಕರಿಗೆ ಪ್ರಶಸ್ತಿ ಒಲಿದಿದೆ. ಕ್ರೀಡಾರತ್ನ ಪ್ರಶಸ್ತಿ ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
ಪೂಜಾ ಗಾಲಿ; ಆಟ್ಯಾ-ಪಾಟ್ಯಾ
ಬಿ.ಎನ್. ಕಿರಣ್ ಕುಮಾರ್; ಬಾಲ್ ಬ್ಯಾಡ್ಮಿಂಟನ್

ಗೋಪಾಲ ನಾಯ್ಕ್; ಕಂಬಳ
ದೀಕ್ಷಾ ಕೆ; ಖೋ ಖೋ
ಶಿವಯೋಗಿ ಬಸಪ್ಪ ಬಾಗೇವಾಡಿ; ಗುಂಡು ಕಲ್ಲು ಎತ್ತುವುದು
ಲಕ್ಷ್ಮೀ ಬಿ ರೆಡೆಕರ್; ಕುಸ್ತಿ
ಪಿ ಗೋಪಾಲಕೃಷ್ಣ; ಯೋಗ
ರಾಘವೇಂದ್ರ ಎಸ್. ಹೊಂಡದಕೇರಿ; ಪವರ್ ಲಿಫ್ಟಿಂಗ್
ಸಿದ್ದಪ್ಪ ಪಾಂಡಪ್ಪ ಹೊಸಮನಿ; ಸಂಗ್ರಾಣಿ ಕಲ್ಲು ಎತ್ತುವುದು
ಸೂರಜ್ ಎಸ್ ಅಣ್ಣಿಕೇರಿ; ಕುಸ್ತಿ
ಶಶಾಂಕ್ ಬಿ.ಎಂ; ಪ್ಯಾರಾ ಈಜು
ಡಿ.ನಾಗಾರಾಜು; ಯೋಗ
ಶ್ರೀವರ್ಷಿಣಿ; ಜಿಮ್ನಾಸ್ಟಿಕ್
ಅವಿನಾಶ್ ವಿ ನಾಯ್ಕ; ಜುಡೋ



Join Whatsapp