ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ನಾವು ಗಮನಿಸಬೇಕಾದ ಅಂಶಗಳೇನು?

Prasthutha|

►ಇಂದಿನಿಂದ ಮೂರು ದಿನ ‘ಹರ್ ಘರ್ ತಿರಂಗಾ’ ಅಭಿಯಾನ

- Advertisement -

ನವದೆಹಲಿ: ಇಂದಿನಿಂದ ಸ್ವಾಂತತ್ರ್ಯ ದಿನದವರೆಗೆ ಮೂರು ದಿನಗಳ ಕಾಲ ಮನೆ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವ ಅಭಿಯಾನಕ್ಕೆ ಸರಕಾರ ಕರೆ ನೀಡಿದ್ದು, ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶದ ಪ್ರತೀ ಮನೆಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯನ್ನು ತಲುಪಿಸುವುದೇ ಈ ಅಭಿಯಾನದ ಉದ್ದೇಶ.

ಮನೆಯಲ್ಲಿ ಹಾರಿಸಿದ ಧ್ವಜದೊಂದಿಗೆ ಸೆಲ್ಫಿ ತೆಗೆದು ‘ಹರ್ ಘರ್ ತಿರಂಗಾ’ ಎಂಬ ವೆಬ್‌ಸೈಟ್‌ನಲ್ಲಿ (https://harghartiranga.com/) ಇದನ್ನು ಅಪ್‌ಲೋಡ್ ಮಾಡಲು ಅವಕಾಶವಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಮಂದಿ ಈ ವೆಬ್‌ಸೈಟ್‌ನಲ್ಲಿ ಧ್ವಜದೊಂದಿಗೆ ತಮ್ಮ ಫೋಟೋ ಅಪ್‌ಲೋಡ್ ಮಾಡಿದ್ದಾರೆ.

- Advertisement -

ಮನೆಯಲ್ಲಿ ಧ್ವಜ ಹಾರಿಸುವಾಗ ಗಮನಿಸಬೇಕಾದ ಅಂಶಗಳು:

* ಧ್ವಜಸ್ಥಂಭದಲ್ಲಿ ಆರೋಹಣ ಮಾಡಿರುವ  ರಾಷ್ಟ್ರಧ್ವಜವನ್ನಷ್ಟೇ ರಾತ್ರಿ ವೇಳೆ ಅವರೋಹಣ ಮಾಡಬೇಕಿರುವುದು. ಹಾಗಾಗಿ ಮನೆಯಲ್ಲಿ ಹಾರಿಸಿದ ಧ್ವಜವನ್ನು ಈ ಮೂರೂ ದಿನಗಳಲ್ಲಿ ರಾತ್ರಿ ವೇಳೆ ಕೆಳಗಿಳಿಸಬೇಕಾಗಿಲ್ಲ.

* ಹತ್ತಿ, ಪಾಲಿಸ್ಟರ್, ಕಂಬಳಿ, ರೇಶ್ಮೆ, ಖಾದಿಗಳಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಬಳಸಬಹುದು.

* ರಾಷ್ಟ್ರಧ್ವಜ ಯಾವುದೇ ಗಾತ್ರದಲ್ಲಿ ಇರಬಹುದು ಆದರೆ ಧ್ವಜದ ಉದ್ದ ಮತ್ತು ಅಗಲ 3:2 ಅನುಪಾತದಲ್ಲಿರಬೇಕು.

* ಛಿದ್ರಗೊಂಡಿರುವ, ಹರಿದ, ಕೊಳಕಿರುವ ರಾಷ್ಟ್ರಧ್ವಜವನ್ನು ಹಾರಿಸುವಂತಿಲ್ಲ.

* ಇತರ ಧ್ವಜಗಳಿಗೆ ಸಮಾನಾಂತರವಾಗಿಯೋ, ಅದಕ್ಕಿಂತ ಕೆಳಭಾಗದಲ್ಲೋ ರಾಷ್ಟ್ರಧ್ವಜ ಹಾರಿಸುವಂತಿಲ್ಲ.

* ತಲೆಕೆಳಗಾದ, ಆಲಂಕಾರಿಕ ರೀತಿಯಲ್ಲಿ ಧ್ವಜ ಹಾರಿಸಬಾರದು. ಧ್ವಜದಲ್ಲಿ ಯಾವುದೇ ಬರಹಗಳಿರಬಾರದು.



Join Whatsapp