ಉದ್ಯಮಿ ಗೌತಮ್ ಅದಾನಿಗೆ Z ಕೆಟಗರಿ ಭದ್ರತೆ ನೀಡಿ ಆದೇಶ ಹೊರಡಿಸಿದ ಕೇಂದ್ರ

Prasthutha|

- Advertisement -

ನವದೆಹಲಿ : ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿಗೆ ಸರ್ಕಾರ Z ಕೆಟಗರಿ ಭದ್ರತೆಯನ್ನು ನೀಡಿದೆ.

ಗುಪ್ತಚರ ಮಾಹಿತಿಯನ್ನು ಆಧರಿಸಿ, ಗೃಹ ಸಚಿವಾಲಯ ಅದಾನಿ ಗ್ರೂಪ್‌ನ ಅಧ್ಯಕ್ಷರಿಗೆ ನೀಡಲು ನಿರ್ಧರಿಸಿದೆ.

- Advertisement -

ಅದಾನಿ ಭದ್ರತೆಯು ಸಶಸ್ತ್ರ ಪಡೆಗಳ ಕೈಯಲ್ಲಿರುತ್ತದೆ. ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಗೌತಮ್ ಅದಾನಿ ಅವರ ಮನೆಯಲ್ಲಿ 10 ಸಶಸ್ತ್ರ ಸ್ಟ್ಯಾಟಿಕ್ ಗಾರ್ಡ್‌ಗಳು ಇರುತ್ತಾರೆ. ಇದಲ್ಲದೆ, 6 ಸುತ್ತಿನ ಪಿಎಸ್‌ಒಗಳು, ಮೂರು ಪಾಳಿಗಳಲ್ಲಿ 12 ಸಶಸ್ತ್ರ ಸ್ಕಾಟ್ ಕಮಾಂಡೋಗಳು, ಸೇರಿ ಸುಮಾರು 33 ಭದ್ರತಾ ಸಿಬ್ಬಂದಿಗಳು ಇರಲಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅವರಿಗೂ ‘ಝಡ್’ ಶ್ರೇಣಿಯ ಭದ್ರತೆ ನೀಡಲಾಗಿತ್ತು. ಅವರು ತಮ್ಮ ಭದ್ರತೆಗಾಗಿ ಖರ್ಚು ಮಾಡಿದ ಮೊತ್ತವನ್ನು ಆಯಾ ಪಡೆಗಳಿಗೆ ಮಾಸಿಕ ಆಧಾರದ ಮೇಲೆ ಪಾವತಿಸುತ್ತಾರೆ ಎಂದು ತಿಳಿದು ಬಂದಿದೆ.



Join Whatsapp