ನಾಲ್ವರನ್ನು ಕೊಂದ ಪ್ರವೀಣ್ ಬಿಡುಗಡೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: 1994ರಲ್ಲಿ ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಂದ ಆರೋಪಿ ಪ್ರವೀಣ್ ನ ಬಿಡುಗಡೆ ಕುರಿತ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

- Advertisement -

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಪ್ರವೀಣ್ ನಿಗೆ 14 ವರ್ಷದ ಹಿಂದೆ ಗಲ್ಲು ಶಿಕ್ಷೆ ಆಗಿತ್ತು. ಬಳಿಕ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಗೆ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಗಳು ಅದನ್ನ ಎತ್ತಿ ಹಿಡಿದಿದ್ದರು.

ಪ್ರವೀಣ್ ನನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಅವರ ಪತ್ನಿ ಹಾಗೂ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಹೊರಗೆ ಬಂದರೆ ಮತ್ತೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹಾಗಾಗಿ  ಯಾವುದೇ ಕಾರಣಕ್ಕೂ ಅವನನ್ನು ಬಿಡುಗಡೆ ಮಾಡಬಾರದು ಎಂದು ಕುಟುಂಬ ಆಗ್ರಹಿಸಿದೆ.

- Advertisement -

ಬೆಳಗಾವಿ ಜೈಲಿನಿಂದ ಕೋರ್ಟ್ ಗೆ ಬರುವಾಗ ಈತ ಹಿಂದೆ ತಪ್ಪಿಸಿಕೊಂಡು ಹೋಗಿದ್ದ. ಗೋವಾದಲ್ಲಿ ಮದುವೆ, ಮಗು ಇತ್ತು ಎಂದು ಕುಟುಂಬವರು ಹೇಳಿದ್ದಾರೆ. ಹಿಂದಿನ GO ಪ್ರಕಾರ 14 ವರ್ಷ ಈತನಿಗೆ ಸನ್ನಡತೆ ಇದೆ. ಹೀಗಾಗಿ ಅವನಿಗೆ ಬಿಡುಗಡೆ ಮಾಡುವ ಪ್ರಸ್ತಾಪ ಬಂದಿದೆ ಎಂದು ತಿಳಿಸಿದರು.

ಕಳೆದ ಕ್ಯಾಬಿನೆಟ್ ನಲ್ಲಿ ಕೊಲೆ ಮಾಡಿದವರಿಗೆ, ರೇಪ್ ಮಾಡದವರನ್ನು ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಬಾರದು ಎಂಬ ನಿಯಮ ಮಾಡಿದ್ದೇವೆ. ಇನ್ನು  ಮುಂದೆ ಇಂತಹ ಕೇಸ್ ನಲ್ಲಿ ಬಿಡಲು ಅನುಮತಿ ನೀಡುವುದಿಲ್ಲ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಎರಡು ಕುಟುಂಬಕ್ಕೆ ಭದ್ರತೆ ಕೊಡುತ್ತೇವೆ ಎಂದು ಹೇಳಿದರು.

ಇದೊಂದು ವಿಶೇಷ ಪ್ರಕರಣ. 4 ಜನರನ್ನು ಕೊಂದಿದ್ದ ಪ್ರವೀಣ್ ನ ಬಿಡುಗಡೆ ಕುರಿತು ಇಂದು ಅಧಿಕಾರಿಗಳ ಸಭೆ ಕರೆದಿದ್ದು , ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೇಳಿಕೆ ವಿರುದ್ಧ ಮಾತನಾಡಿದ ಸಚಿವರು, ಕಾಂಗ್ರೆಸ್ ನಾಯಕರ ಹೇಳಿಕೆ ಮತ್ತು ಟ್ವೀಟ್ ಮೂರ್ಖ ತನದ್ದು. ಬಿಜೆಪಿ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಅವರು ಹೇಗೆ ಬದಲಾವಣೆ ಮಾಡುತ್ತಾರೆ. ಬೊಮ್ಮಾಯಿ ಆಡಳಿತ ನೋಡಿ ಕಾಂಗ್ರೆಸ್ ಗೆ ತಲೆ ಕೆಟ್ಟಿದೆ. ಅವರ ಅಭಿವೃದ್ಧಿ ಕೆಲಸ ನೋಡಿ ಕಾಂಗ್ರೆಸ್ ಗೆ ಭಯ ಬಂದಿದೆ. ಹೀಗಾಗಿ ಕಾಂಗ್ರೆಸ್ ನವರು ಹೀಗೆ ಮಾತಾಡ್ತಿದ್ದಾರೆ, ಜನ ಕಾಂಗ್ರೆಸ್ ಮಾತು ಕೇಳಿ ನಗುತ್ತಿದ್ದಾರೆ ಎಂದು ಕಿಡಿಕಾರಿದರು.



Join Whatsapp