ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆಯೇರಿಕೆ | ನೆಟ್ಟಿಗರಿಂದ ಬಿಜೆಪಿಯ ಟ್ರೋಲ್

Prasthutha|

ದೇಶದ ಮೆಟ್ರೋ ನಗರಗಳಲ್ಲಿ ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ ಕಂಡಿದ್ದು, ನೆಟ್ಟಿಗರು ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 47 ದಿನಗಳಿಂದ ಸ್ಥಿರವಾಗಿದ್ದ ತೈಲ ಬೆಲೆಯು ಕಳೆದ ಮೂರು ದಿನದ ಹಿಂದೆ ಏರಿಕೆಯ ಮುಖ ಕಂಡಿದ್ದು, ಸತತ ಮೂರನೇ ದಿನಗಳ ಕಾಲವೂ ದರ ಹೆಚ್ಚಾಗುತ್ತಲೇ ಇದೆ.
ದೆಹಲಿಯಲ್ಲಿ ಪೆಟ್ರೋಲ್ ಲೀಟರಿಗೆ ರೂ.80.90 ಇದ್ದರೆ, ಮುಂಬೈಯಲ್ಲಿ ಲೀಟರಿಗೆ ರೂ. 87.58ಕ್ಕೆ ಏರಿದೆ. ಕೋಲ್ಕತ್ತಾದಲ್ಲಿ ಲೀಟರಿಗೆ ರೂ. 82.43, ಚೆನ್ನೈಯಲ್ಲಿ ಲೀಟರಿಗೆ ರೂ. 83.99 ರ ವರೆಗೆ ಏರಿಕೆಯಾಗಿದೆ.

- Advertisement -

ಈ ನಡುವೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗದಿದ್ದರೂ ಭಾರತದಲ್ಲಿ ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿರುವುದರ ವಿರುದ್ಧ ಟ್ವಿಟ್ಟರಿಗರು ಗರಂ ಆಗಿದ್ದಾರೆ. ಈ ಹಿಂದೆ ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಾದ ಸಂದರ್ಭದಲ್ಲಿ ಆಳುತ್ತಿದ್ದ ಯುಪಿಎ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ನಾಯಕರು ಬೀದಿಗಿಳಿದು ಚಿತ್ರ ವಿಚಿತ್ರವಾಗಿ ಪ್ರತಿಭಟನೆ ನಡೆಸಿದ್ದರು. ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 97 ಡಾಲರ್ ಇದ್ದಾಗ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರೂ 76 ಆಗಿತ್ತು. ಈಗ ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 44 ಡಾಲರ್ ಇದ್ದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ರೂ. 87ರ ವರೆಗೆ ಬಂದು ತಲುಪಿದೆ ಎನ್ನುವುದನ್ನು ಅವರು ಬೊಟ್ಟು ಮಾಡಿದ್ದಾರೆ. ಈಗ ಅವರದೇ ಸರ್ಕಾರವಿದ್ದರೂ, ಈ ರೀತಿಯ ನಿರಂತರ ಏರಿಕೆಯ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಪೆಟ್ರೋಲ್ ಬೆಲೆಯೇರಿಕೆಯ ಕುರಿತಂತೆ ಟ್ವಿಟ್ಟರಿಗರ ಆಯ್ದ ಟ್ವೀಟ್ ಗಳು:



Join Whatsapp