ಬೆಂಗಳೂರು: ಬಿಲ್ಲವ ಯುವ ವಾಹಿನಿಯ ಮುಖಂಡ ಪ್ರವೀಣ್ ನೆತ್ಯಾರ್ ಹತ್ಯೆ ಖಂಡನೀಯ. ಸರ್ಕಾರ ತನಿಖೆಗೂ ಮೊದಲೇ ಪೂರ್ವಗ್ರಹ ಪೀಡಿತರಾಗದೆ “ನೈಜ” ಕೊಲೆಗಡುಕರನ್ನು ಪತ್ತೆ ಹಚ್ಚಿ ಬಂಧಿಸಬೇಕು. ಅಮಾಯಕ ಯುವಕರ ಹತ್ಯೆಗಳು ನಿಲ್ಲಬೇಕಿದೆ. ಕರಾವಳಿ ಜನತೆ ಯಾವುದೇ ಉತ್ಪ್ರೇಕ್ಷೆಗೆ ಒಳಗಾಗದೆ ಶಾಂತಿ ಕಾಪಾಡಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.