ನನ್ನ ಹೇಳಿಕೆಯನ್ನು ತಿರುಚಲಾಗಿದೆ, ಒಕ್ಕಲಿಗರ ಬಗ್ಗೆ ನಾನು ಎಲ್ಲಿಯೂ ತಪ್ಪು ಮಾತನಾಡಿಲ್ಲ: ಶಾಸಕ ಜಮೀರ್ ಅಹ್ಮದ್

Prasthutha|

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರು ನಮ್ಮ ಅಧ್ಯಕ್ಷರು. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನನಗೂ ಒಕ್ಕಲಿಗ ಸಮುದಾಯದಲ್ಲಿ ಬಹಳಷ್ಟು ಆತ್ಮಿಯರಿದ್ದಾರೆ ಎಂದು  ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಶ್ರೀ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

- Advertisement -

ಹುಬ್ಬಳ್ಳಿಯಲ್ಲಿ  ನಡೆದ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಪೂರ್ವ ಭಾವಿ ಸಭೆ ಯಲ್ಲಿ ಭಾಗವಹಿಸಿ, ಬಳಿಕ ಅವರು ಮಾತನಾಡಿದ ಅವರು, ನಾನು ಹೇಳಿದ್ದು, ಕೇವಲ ಒಂದು ಸಮುದಾಯದ ಮತಗಳಿಂದ ಮುಖ್ಯಮಂತ್ರಿಗಳಾಗಲು ಸಾಧ್ಯವಿಲ್ಲ. ಎಲ್ಲ ಸಮುದಾಯದವರ ಬೆಂಬಲ, ಆಶೀರ್ವಾದ ಇದ್ದರೆ ಮಾತ್ರ ರಾಜ್ಯದ ಸಿಎಂ ಆಗಲು ಸಾಧ್ಯ ಎಂದು. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆಯೇ ಹೊರತು, ನಾನು ಒಗ್ಗಲಿಗರ ಬಗ್ಗೆ ಆಗಲಿ, ಅಥವಾ ಯಾವುದೇ ಸಮುದಾಯದ ಬಗ್ಗೆ ಎಲ್ಲಿಯೂ ತಪ್ಪು ಹೇಳಿಕೆ ನೀಡಿಲ್ಲ.

ನನ್ನ ಹೇಳಿಕೆಯನ್ನು ತಿರುಚಲಾಗಿದ್ದು , ಈ ಬಗ್ಗೆ ಮಾನ್ಯ ಶ್ರೀ ಸಿ.ಟಿ ರವಿ ಅವರು ಹಾಗೂ ಆರ್ ಅಶೋಕ್ ಅವರು ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಸ್ವಾಮೀಜಿ ಅವರು ಅಸಮಾಧಾನಗೊಂಡಿದ್ದು ನನಗೆ ಗೊತ್ತಿಲ್ಲ. ಒಕ್ಕಲಿಗರ ಸಮುದಾಯದ ಮೇಲೆ ನನಗೆ ಅಪಾರ ಗೌರವ, ಅಭಿಮಾನವಿದೆ. ನಾನು ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಎಐಸಿಸಿ ಯಿಂದ ನೋಟಿಸ್ ಬಂದಿದೆ ಎಂಬುದು ಸುಳ್ಳು. ನಾನು ಏನೂ ತಪ್ಪು ಮಾತನಾಡಿಯೇ ಇಲ್ಲ ಎಂದ ಮೇಲೆ ನನಗೇಕೆ ನೋಟೀಸ್ ನೀಡುತ್ತಾರೆ ಮತ್ತು ಚೆಲುವರಾಯಸ್ವಾಮಿ ಅವರು ನಂಗೆ ಏನೂ ಹೇಳಿಲ್ಲ ಎಂದು ಶಾಸಕ ಜಮೀರ್ ಸ್ಪಷ್ಟಪಡಿಸಿದರು.

- Advertisement -

ಮುಂದುವರಿದು ಮಾತನಾಡಿದ ಅವರು, ಯಾರೋ ನನ್ನ ಬಗ್ಗೆ ಇಲ್ಲದ ವದಂತಿ ಹಬ್ಬಿಸಿ, ಬಾಯಿಗೆ ಬಂದಂತೆ ಅಬ್ಬರಿಸಿ ಬೊಬ್ಬಿರಿದು, ನನ್ನ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ, ಅದು ಸಾಧ್ಯವಿಲ್ಲ. ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆಯೇ. ನಾನು ಪಕ್ಷ ಪೂಜೆನೂ ಮಾಡ್ತಿ‌‌ನಿ. ಜೊತೆಗೆ ವ್ಯಕ್ತಿ ಪೂಜೆನೂ ಮಾಡ್ತೀನಿ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ.

 ಪದೇ ಪದೇ ಅದೇ ವಿಚಾರ ಮುಂದುವರೆಸೋದು ಬೇಡ. ರಾಜಕೀಯದಲ್ಲಿ ನಮ್ಮ ಭವಿಷ್ಯ ನಿರ್ಧರಿಸುವವರು ಜನ ಎಂದು ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಹೇಳಿದರು.



Join Whatsapp