ಮಸೂದ್ ಗುಂಪು ಹತ್ಯೆ: ಇಮಾಮ್ಸ್ ಕೌನ್ಸಿಲ್ ಖಂಡನೆ

Prasthutha|

ಮಂಗಳೂರು: ಸುಳ್ಯ ಕಳಂಜ ಗ್ರಾಮದ ಅಮಾಯಕ ಮುಸ್ಲಿಮ್ ಯುವಕ ಮಸೂದ್ ನನ್ನು ಕರೆಸಿ ಬಜರಂಗದಳದ ಎಂಟು ಮಂದಿಯ ತಂಡ ಗಂಭೀರವಾಗಿ ಹಲ್ಲೆ ನಡೆಸಿ ಕೊಂದು ಹಾಕಿದ್ದು ಅತ್ಯಂತ ಭೀಕರ ಘಟನೆ. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ. ಮಸೂದ್ ಕುಟುಂಬದವರಿಗೆ ಗರಿಷ್ಠ ಪರಿಹಾರ ಮೊತ್ತ ಹಾಗೂ ನ್ಯಾಯವನ್ನು ಸರಕಾರ ಒದಗಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ. ಕ .ಜಿಲ್ಲಾ ಸಂಚಾಲಕ ಜಾಫರ್ ಫೈಝಿ ಆಗ್ರಹಿಸಿದ್ದಾರೆ.

- Advertisement -

ಪೂರ್ವ ತಯಾರಿ ನಡೆಸಿ ಗುಂಪು ಹತ್ಯೆ ಮಾಡಿದ ಅಪರಾಧಿಗಳಿಗೂ ಇದರ ಹಿಂದಿರುವ ಬಜರಂಗದಳದ ಮುಖಂಡರುಗಳನ್ನು ಪತ್ತೆ ಹಚ್ಚಿ ಎಲ್ಲರ ಮೇಲೂ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಜಾಫರ್ ಫೈಝಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.



Join Whatsapp