ಸಂಘಿಗಳ ನೈತಿಕ ಗೂಂಡಾಗಿರಿಗೆ ವಿಶೇಷ ರೀತಿಯಲ್ಲಿ ಉತ್ತರಿಸಿದ ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

Prasthutha|

ತಿರುವನಂತಪುರಂ: ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬಸ್ ನಿಲ್ದಾಣದಲ್ಲಿ ಒಟ್ಟಿಗೆ ಕುಳಿತುಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಸಂಘಿಗಳು ನಡೆಸಿದ್ದ ನೈತಿಕ ಪೊಲೀಸ್ ಗಿರಿಗೆ ಇಲ್ಲಿನ ಸಿಇಟಿ ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.

- Advertisement -

ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವುದನ್ನು ಪ್ರದೇಶದ ಸಂಘ ಪರಿವಾರ ಗೂಂಡಾಗಳು ಹಲವು ಬಾರಿ ತಡೆದಿದ್ದರು. ಅಲ್ಲದೆ, ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಕುಳಿತುಕೊಳ್ಳುವುದನ್ನು ತಡೆಯಲು ಬಸ್ ನಿಲ್ದಾಣದ ಬೆಂಚ್ ಅನ್ನು ಧ್ವಂಸಗೊಳಿಸಿ ಮೂರು ಪ್ರತ್ಯೇಕ ಆಸನಗಳು ಅಲ್ಲಿ ನಿರ್ಮಿಸಿದ್ದರು.

ಇದಕ್ಕೆ ಒಬ್ಬರ ಕಾಲಿನ ಮೇಲೆ ಒಬ್ಬರು ಕುಳಿತುಕೊಂಡು ಸಿಇಟಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ವ್ಯಕ್ತಪಡಿಸಿ ನೈತಿಕ ಪೊಲೀಸ್ ಗಿರಿ ಮಾಡಿದವರಿಗೆ ಸಂದೇಶ ರವಾನಿಸಿದ್ದಾರೆ. ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು , ತಿರುವನಂತಪುರಂ ನಗರದ ಮೇಯರ್ ಆರ್ಯ ಎಸ್ ರಾಜೇಂದ್ರನ್ ಅವರು ವಿದ್ಯಾರ್ಥಿಗಳು ತೆಗೆದುಕೊಂಡ ನಿಲುವನ್ನು ಶ್ಲಾಘಿಸಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಈ ವಿಷಯದಲ್ಲಿ ಚರ್ಚೆ ಮಾಡಿದ್ದಾರೆ.

- Advertisement -

ಮೇಯರ್ ನೊಂದಿಗೆ ಮಾತಾಡಿದ ವಿದ್ಯಾರ್ಥಿಗಳು, ನಾವು ದೀರ್ಘಕಾಲದಿಂದ ಇಂತಹ ಶೋಷಣೆನೆಯನ್ನು ಅನುಭವಿಸುತ್ತಿದ್ದೇವೆ ಆದ್ದರಿಂದ ನಾವು ಅದಕ್ಕೆ ಪ್ರತಿಕ್ರಿಯಿಸುವ ಸಮಯ ಬಂದಿದೆ ಎಂದು ನಾವು ನಿರ್ಧರಿಸಿದ್ದೇವೆ. ಸಹಜವಾಗಿ, ಛಾಯಾಚಿತ್ರಗಳು ವೈರಲ್ ಆಗುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಭವಿಷ್ಯದಲ್ಲಿ ಇಂತಹ ನೈತಿಕ ಪೊಲೀಸ್ ಗಿರಿ ನಡೆಯದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೆವು ಎಂದು ಹೇಳಿದ್ದಾರೆ.

ಸಿಇಟಿ ವಿದ್ಯಾರ್ಥಿಗಳ ನಿಲುವನ್ನು ಶ್ಲಾಘಿಸಿದ ರಾಜೇಂದ್ರನ್, ಈ ಪೀಳಿಗೆಯು ಭವಿಷ್ಯದ ಭರವಸೆಯಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳು ಈ ವಿಷಯದಲ್ಲಿ ವಿದ್ಯಾರ್ಥಿಗಳೊಂದಿಗೆ ಇದ್ದಾರೆ ಎಂದು ಹೇಳಿದರು.

ಆ ಬಳಿಕ ಮೇಯರ್, ಫೇಸ್ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ಆಸನವನ್ನು ಮೂರು ಸ್ಥಾನಗಳಾಗಿ ಕತ್ತರಿಸಿದ ರೀತಿ “ಅನುಚಿತ” ಮಾತ್ರವಲ್ಲ, ಕೇರಳದಂತಹ ಪ್ರಗತಿಪರ ಸಮಾಜಕ್ಕೆ ಸೂಕ್ತವಲ್ಲ ಎಂದು ಹೇಳಿದರು.ನಮ್ಮ ರಾಜ್ಯದಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳಲು ಯಾವುದೇ ನಿಷೇಧವಿಲ್ಲ ಮತ್ತು ಅಂತಹ ನಿಷೇಧ ಇರಬೇಕು ಎಂದು ಇನ್ನೂ ನಂಬುವವರು ಇನ್ನೂ ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದಾರೆ . ಕಾಲ ಬದಲಾಗಿದೆ ಎಂದು ಅರ್ಥಮಾಡಿಕೊಳ್ಳದವರ ಬಗ್ಗೆ ಮಾತ್ರ ಸಹಾನುಭೂತಿ ತೋರಲು ಸಾಧ್ಯ ಎಂದು ಅವರು ಹೇಳಿದ್ದಾರೆ

ಸಿಪಿಐ(ಎಂ)ನ ಯುವ ಘಟಕ ಡಿವೈಎಫ್ಐ ಕೂಡ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಹಳೆಯ ಶೈಲಿಯ ನೈತಿಕ ಪರಿಕಲ್ಪನೆಗಳನ್ನು ಹೇರಲು ಪ್ರಯತ್ನಿಸುವವರು ಮತ್ತು ಲಿಂಗ ನ್ಯಾಯದಲ್ಲಿ ನಂಬಿಕೆ ಇಲ್ಲದವರು ಸಮಾಜಕ್ಕೆ ಅಪಾಯ ಎಂದು ಹೇಳಿದೆ.



Join Whatsapp