ಲಖನೌ: ಖ್ಯಾತ ಪತ್ರಕರ್ತ ಮುಹಮ್ಮದ್ ಝುಬೇರ್ ಅವರ ಜಾಮೀನು ಅರ್ಜಿಯನ್ನು ಶನಿವಾರ ಉತ್ತರ ಪ್ರದೇಶದ ಮುಹಮ್ಮದಿಯ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಈ ನಿಟ್ಟಿನಲ್ಲಿ ಜುಲೈ 20 ರಂದು ಮುಹಮ್ಮದ್ ಝುಬೈರ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳಪಡಿಸಲಾಗುವುದೆಂದು ಅವರ ಪರ ವಕೀಲರಾದ ಹರ್ಜಿತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಮುಹಮ್ಮದ್ ಝುಬೈರ್ ಅವರು ಮಾಡಿದ್ದ ಟ್ವೀಟ್ ಪೋಸ್ಟ್ ವೊಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ 2021ರ ಸೆಪ್ಟೆಂಬರ್’ನಲ್ಲಿ ಪತ್ರಕರ್ತರೊಬ್ಬರು ನೀಡಿದ ದೂರಿನನ್ವಯ ಲಖಿಂಪುರ ಖೇರಿ ನ್ಯಾಯಾಲಯ ಸಮನ್ಸ್ ನೀಡಿತ್ತು.
ಅಲ್ಲದೆ ನ್ಯಾಯಾಲಯ ಸೋಮವಾರ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸೀತಾಪುರ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.