ಪಾಲಕ್ಕಾಡ್: ಹಲ್ಲುಜ್ಜುವ ಮೊದಲು ತಮ್ಮ ಮಗುವಿಗೆ ಮುತ್ತು ಕೊಡಬೇಡ ಎಂದಿದ್ದಕ್ಕೆ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ.
ದೀಪಿಕಾ (28) ಕೊಲೆಯಾದ ಗೃಹಿಣಿ. ಪತಿ ಅವಿನಾಶ್ (30) ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪಾಲಕ್ಕಾಡ್ ನಿವಾಸಿಯಾಗಿದ್ದ ಇವರು 2019 ರಲ್ಲಿ ವಿವಾಹವಾಗಿದ್ದರು. ಅವಿನಾಶ್ ಮತ್ತು ದೀಪಿಕಾಗೆ ಒಂದೂವರೆ ವರ್ಷದ ಮಗನಿದ್ದು, ಬೆಳಗ್ಗೆ ಎದ್ದಾಗ ಅವಿನಾಶ್ ತಮ್ಮ ಮಗನಿಗೆ ಪ್ರೀತಿಯ ಮುತ್ತು ನೀಡುತ್ತಿದ್ದರು. ಇದನ್ನು ಪತ್ನಿ ದೀಪಿಕಾ ವಿರೋಧಿಸುತ್ತಿದ್ದರು. ಹಲ್ಲುಜ್ಜದೇ ಮಗನಿಗೆ ಕಿಸ್ ಮಾಡಬೇಡ ಎಂದು ತಗಾದೆ ತೆಗೆಯುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಅವಿನಾಶ್ ದೀಪಿಕಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.