ಕಾಂಗ್ರೆಸ್ ನಾಯಕರ ಮೇಕೆದಾಟು ನಡಿಗೆ: ದೋಷಾರೋಪ ಪಟ್ಟಿಗೆ ತಡೆ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹಿತ ಹಲವು ಕಾಂಗ್ರೆಸ್ ನಾಯಕರ ಮೇಲೆ ಮೇಕೆದಾಟು ನಡಿಗೆ ಸಂಬಂಧ ಕೋವಿಡ್ ನೀತಿ ನಿಯಮ ಉಲ್ಲಂಘಿಸಿದ ಪ್ರಕರಣದಡಿ ಹಾಕಿದ್ದ ಚಾರ್ಜ್ ಶೀಟಿಗೆ ಜಸ್ಟಿಸ್ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯ ಪೀಠವು ತಡೆ ನೀಡಿದೆ.

- Advertisement -

ಮೇಕೆದಾಟು ಅಣೆಕಟ್ಟು ಕಟ್ಟಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕುಡಿಯುವ ನೀರಿಗಾಗಿ ಮೇಕೆದಾಟು ನಡಿಗೆ ಹಮ್ಮಿಕೊಂಡಿತ್ತು. ಈ ವರ್ಷದ ಜನವರಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮವನ್ನು ಮೊದಲೇ ನಿರ್ಧರಿಸಿತ್ತು. ಆದರೆ ನಡಿಗೆ ಕಾಲಕ್ಕೆ ರಾಜ್ಯ ಸರಕಾರವು ಕೊರೋನಾ ಲಾಕ್ ಡೌನ್ ನಿಯಮಾವಳಿಗಳನ್ನು ಜಾರಿಗೊಳಿಸಿತ್ತು.

ಕಾಂಗ್ರೆಸ್ ಪರ ಹಾಜರಾದ ಹಿರಿಯ ವಕೀಲ ಪೊನ್ನಪ್ಪ ಅವರು ಸಾಂಕ್ರಾಮಿಕ ಕಾರಣಕ್ಕೆ ಲಾಕ್ ಡೌನ್ ಇತ್ಯಾದಿ ನಿಯಮಾವಳಿ ಹೇರುವುದಿದ್ದರೂ ಕಾಯ್ದೆ ಕ್ರಮ ಪ್ರಕಾರ ನೋಟೀಸ್ ನೀಡಿ ಹೇರಬೇಕಾಗುತ್ತದೆ. ಅಲ್ಲದೆ ಸಾಂಕ್ರಾಮಿಕ ಕಾಲದಲ್ಲಿ ಕೇಂದ್ರ ಸರಕಾರದ ವಿಪತ್ತು ನಿರ್ವಹಣಾ ನಿಯಮಾವಳಿಗಳ ಮೆಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದು ಶುದ್ಧ ಕಾನೂನು ಬಾಹಿರ ಎಂದು ವಕೀಲರು ಕೋರ್ಟಿಗೆ ಮನನ ಮಾಡಿದರು. ಅಲ್ಲದೆ ಪಾದಯಾತ್ರೆಗೆ ರಾಜ್ಯದ ಕಾನೂನು ಸುವ್ಯವಸ್ಥೆ ಏಜೆನ್ಸಿಗಳು ಅನುಮತಿ ನೀಡಿದ್ದವು. ಹಾಗಿದ್ದೂ ಚಾರ್ಜ್ ಶೀಟ್ ಸಲ್ಲಿಸಿರುವುದು ಕಾನೂನಿಗೇ ವಿರೋಧವಾದುದು ಎಂದು ಕಾಂಗ್ರೆಸ್ ಪರ ವಾದಿಸಲಾಯಿತು.



Join Whatsapp