ಶಿವಸೇನೆಯನ್ನು ಮಹಾ ಆಘಾಡಿ ಹಿಡಿತದಿಂದ ಕಾಪಾಡಲು ನನ್ನ ಹೋರಾಟ: ಏಕನಾಥ್ ಶಿಂಧೆ

Prasthutha|

ಮುಂಬೈ: ಮಹಾ ವಿಕಾಸ್ ಆಘಾಡಿ (ಎಂವಿಎ) ಹಿಡಿತದಿಂದ ಪಕ್ಷವನ್ನು ಕಾಪಾಡಲು ನಾನು ಹೋರಾಡುತ್ತಿದ್ದೇನೆ ಎಂಬುದನ್ನು ಶಿವಸೇನೆ ಕಾರ್ಯಕರ್ತರು ಅರ್ಥಮಾಡಬೇಕೆಂದು ಬಂಡಾಯ ನಾಯಕ ಏಕನಾಥ್ ಶಿಂಧೆ ತಿಳಿಸಿದ್ದಾರೆ.

- Advertisement -

ಪಕ್ಷದ ಅಧ್ಯಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಿಷ್ಠರಾಗಿರುವ ಶಿವಸೇನಾ ಕಾರ್ಯಕರ್ತರು, ಬಂಡಾಯ ಶಾಸಕರ ಬ್ಯಾನರ್’ಗಳನ್ನು ವಿರೂಪಗೊಳಿಸಿ, ಕೆಲವು ಸ್ಥಳಗಳಲ್ಲಿ ಕಲ್ಲು ಎಸೆದು ಕಚೇರಿಯನ್ನು ಧ್ವಂಸಗೊಳಿಸಿದ ಬಳಿಕ ಶಿಂಧೆ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಈ ಕುರಿತು ಮಾರಾಠಿಯಲ್ಲಿ ಟ್ವೀಟ್ ಮಾಡಿರುವ ಶಿಂಧೆ, ನನ್ನ ಪ್ರೀತಿಯ ಶಿವಸೇನಾ ಕಾರ್ಯಕರ್ತರೇ, ಎಂವಿಎಯ ಕುತಂತ್ರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಎಂವಿಎ ಎಂಬ ಹೆಬ್ಬಾವಿನ ಹಿಡಿತದಿಂದ ಶಿವಸೇನೆ ಮತ್ತು ಕಾರ್ಯಕರ್ತರನ್ನು ರಕ್ಷಿಸಲು ನಾನು ಹೋರಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

- Advertisement -

ನಾನು ಈ ಹೋರಾಟವನ್ನು ಶಿವಸೇನೆ ಕಾರ್ಯಕರ್ತರ ಹಿತಾಸಕ್ತಿಗಾಗಿ ಅರ್ಪಿಸುತ್ತೇನೆ ಎಂದ ಅವರು, ಕಾಂಗ್ರೆಸ್ ಮತ್ತು ಎನ್.ಸಿ.ಪಿ ಜೊತೆಗಿನ ಅಸ್ವಾಭಾವಿಕ ಮಹಾ ವಿಕಾಸ್ ಆಘಾಡಿ ಮೈತ್ರಿಯಿಂದ ಶಿವಸೇನೆ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿಯನ್ನು ಪುನರುಜ್ಜೀವನಗೊಳಿಸಬೇಕೆಂದು ಶಿಂಧೆ ಮತ್ತು ಬೆಂಬಲಿಗರು ಈ ಮೊದಲು ತಿಳಿಸಿದ್ದರು.



Join Whatsapp