ಉದ್ಧವ್ ಠಾಕ್ರೆ ಗೂಂಡಾಗಿರಿ ಕೊನೆಯಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ: ಸಂಸದೆ ನವನೀತ್ ರಾಣಾ

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗೂಂಡಾಗಿರಿ ಕೊನೆಯಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕು ಎಂದು ಅಮರಾವತಿ ಪಕ್ಷೇತರ ಸಂಸದೆ ನವನೀತ್ ರಾಣಾ ಮನವಿ ಮಾಡಿದ್ದಾರೆ.

- Advertisement -

ಉದ್ಧವ್ ಠಾಕ್ರೆ ಅವರ ವಿರುದ್ಧ ಬಂಡಾಯ ಎದ್ದ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ನಾನು ಅಮಿತ್ ಶಾ ಅವರನ್ನು ವಿನಂತಿಸುತ್ತೇನೆ ಎಂದು ರಾಣಾ ಹೇಳಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿದ್ದ ನವನೀತ್ ಕೌರ್ ಮತ್ತು ಪತಿ ರವಿ ರಾಣಾ ರಾಜದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದರು



Join Whatsapp