ಅಗ್ನಿವೀರರು ಸಮರ್ಥರಾಗಿದ್ದರೆ ನಾಲ್ಕು ವರ್ಷಗಳ ಬಳಿಕ ಹೊರಹಾಕುವುದೇಕೆ ? ಶತ್ರುಘ್ನ ಸಿನ್ಹಾ ಪ್ರಶ್ನೆ

Prasthutha|

ನವದೆಹಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಅಗ್ನಿಪಥ್’ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ, ಈ ನೇಮಕಾತಿ ಯೋಜನೆಯು ದೋಷಪೂರಿತ ನೀತಿಯಿಂದ ಕೂಡಿದೆ ಎಂದು ಆರೋಪಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಅಗ್ನಿವೀರರು ಸಮರ್ಥರಾಗಿದ್ದರೆ ನಾಲ್ಕು ವರ್ಷಗಳ ಬಳಿಕ ಅವರನ್ನು ನಿವೃತ್ತಗೊಳಿಸಿ ಹೊರಹಾಕುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

- Advertisement -


ಯೋಜನೆಯು ತಂತ್ರಜ್ಞಾನ-ಬುದ್ಧಿವಂತ ಪಡೆಯನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಸರಕಾರ ಹೇಳುತ್ತದೆ, ಆದರೆ ಇಷ್ಟು ಸಮರ್ಥರಾಗಿದ್ದರೆ ನಾಲ್ಕು ವರ್ಷಗಳ ಬಳಿಕ ಹೇಗೆ ನಿವೃತ್ತರಾಗುತ್ತಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಈ ಯೋಜನೆಯ ವಿರುದ್ಧ ಪ್ರತಿಭಟನೆಗಳು ಅನಿವಾರ್ಯವಾಗಿವೆ ಎಂದು ಸಿನ್ಹಾ ಹೇಳಿದ್ದಾರೆ.


ನಾಲ್ಕು ವರ್ಷಗಳ ನಂತರ ಅವರನ್ನೇಕೆ ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಲು ಹೊರಹಾಕುತ್ತೀರಾ ಎಂದು ಪ್ರಶ್ನಿಸಿರುವ ಸಂಸದ ಸಿನ್ಹಾ, ಸೇನೆಯ ಅನೇಕ ಜನರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



Join Whatsapp