ಮಂಗಳೂರು: ವಕೀಲರ ಸಂಘದ ಚುನಾವಣೆಯು ಜೂನ್ 10 ಶುಕ್ರವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಕೆ. ಪೃಥ್ವಿರಾಜ್ ರೈ ಆಯ್ಕೆಯಾದರು. ಹಿರಿಯ ವಕೀಲ ಹಾಗೂ ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂರು ವಕೀಲರು ಸ್ಪರ್ಧಿಸಿದ್ದು, ಶ್ರೀಧರ ಎಣ್ಮಕಜೆ ಎಲ್ಲರನ್ನೂ ಮೀರಿಸಿ ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಶಶಿರಾಜ್ ರಾವ್ ಕಾವೂರು ಚುನಾಯಿತರಾದರು. ಮಹಿಳಾ ಮೀಸಲು ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಚೈತ್ರಾ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು. ಪ್ರಸಾದ್ ಪೂಜಾರಿ, ರೇಷ್ಮ ಡಿ ಸೋಜ, ಸುಹಾಸ್ ಶೆಟ್ಟಿ (3 to 10 ವಿಭಾಗದಲ್ಲಿ), ಶುಕರಾಜ್ ಕೊಟ್ಟಾರಿ, ಶೀತಲ್, ವಿಕ್ರಮ ಪಡ್ವೆಂತಾಯ (10 to 20 ವಿಭಾಗದಲ್ಲಿ), ದಿನಕರ ಶೆಟ್ಟಿ, ಈಶ್ವರ್ ಕೊಟ್ಟಾರಿ, ಶ್ರೀಕುಮಾರ್ (Above 20 ವಿಭಾಗದಲ್ಲಿ- ಅವಿರೋಧ), ವಾಸುದೇವ ಗೌಡ, ಬೇಬಿ ಅರಸ, ದೇವದಾಸ್ ರಾವ್ (Above 30), ಮಹಿಳಾ ವಿಭಾಗದಲ್ಲಿ ಸ್ವಾತಿ, ಜೀಟಾ ಪ್ರಿಯಾ ಮೋರಸ್(ಅವಿರೋಧ), ಸುಮನಾ ಶರಣ್ ಆಯ್ಕೆಯಾದರು.