ಇರಾಕ್: 3,400 ವರ್ಷಗಳ ಹಿಂದಿನ ಪ್ರಾಚೀನ ಸಾಂಸ್ಕೃತಿಕ ನಗರ ಪತ್ತೆ

Prasthutha|

🖊️Anon Suf

- Advertisement -

ಬಗ್ದಾದ್: ಇರಾಕ್‌ ನ ಕುರ್ದಿಶ್‌ ಪ್ರಾಂತ್ಯದಲ್ಲಿ, ವಿಶಾಲವಾದ ಜಲಾಶಯವೊಂದರಲ್ಲಿ ಮುಳುಗಿಹೋಗಿದ್ದ 3,400 ವರ್ಷಗಳ ಹಿಂದಿನ ನಗರವೊಂದು ಕಾಣಿಸಿಕೊಂಡಿದೆ.

ಕುರ್ದಿಷ್‌ ಪ್ರಾಂತ್ಯದ ಕೆಮುನ್‌ ಎಂಬಲ್ಲಿ ಟೈಗ್ರಿಸ್‌ ನದಿಗೆ ಜಲಾಶಯವೊಂದನ್ನು ದಶಕಗಳ ಹಿಂದೆಯೇ ಕಟ್ಟಲಾಗಿದೆ. ಅಂದಿನಿಂದ ನದಿಯಲ್ಲಿ ನೀರು ಯಥೇತ್ಛವಾಗಿ ಹರಿಯುತ್ತಿತ್ತು. ಈಗ ಈ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಮಳೆಯಿಲ್ಲದ ಕಾರಣ ಟೈಗ್ರಿಸ್ ನದಿಯಲ್ಲಿ ನೀರು ಬತ್ತಿ ಹೋಗಿದೆ. ಅದರ ಪರಿಣಾಮದಿಂದಾಗಿ ಜಲಾಶಯವೂ ಬರಿದಾಗಿದ್ದು ಅದರ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಪುರಾತನ ನಗರ ಗೋಚರಿಸಿದೆ.

- Advertisement -

ವಿಷಯ ತಿಳಿದ ಕೂಡಲೇ, ಸ್ಥಳಕ್ಕೆ ಭೇಟಿ ನೀಡಿ ಸಂಶೋಧನೆ ನಡೆಸಿದ ಜರ್ಮನಿ ಹಾಗೂ ಕುರ್ದಿಶ್‌ ಪ್ರಾಂತ್ಯದ ಪ್ರಾಚ್ಯವಸ್ತು ತಜ್ಞರು, ಇದು ಕ್ರಿಸ್ತ ಪೂರ್ವ 1350ರಿಂದ 1550ರವರೆಗೆ ಅಸ್ತಿತ್ವದಲ್ಲಿದ್ದ ಮಿತ್ತಾನಿ ಸಾಮ್ರಾಜ್ಯದಲ್ಲಿ ಇದ್ದ ನಗರವಾಗಿದ್ದು, ವ್ಯಾವಹಾರಿಕವಾಗಿ, ಸಾಂಸ್ಕೃತಿಕವಾಗಿ ಇದೊಂದು ಪ್ರಮುಖ ನಗರವಾಗಿತ್ತು ಎಂದು ತಿಳಿಸಿದ್ದಾರೆ.



Join Whatsapp