ಮಿಂಟೋ ಪ್ರಕರಣ; ಔಷಧಿ ಕಂಪನಿಗಳ ವಿರುದ್ಧದ ವಿಚಾರಣೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್

Prasthutha|

ಬೆಂಗಳೂರು: ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಕಣ್ಣಿನ ಸೋಂಕನ್ನು ಉಂಟುಮಾಡುತ್ತದೆ ಎಂದು ಆರೋಪಿಸಿ ತಯಾರಿಸಿದ ಔಷಧಿಗಳಿಗಾಗಿ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿಯಲ್ಲಿ ಔಷಧಿ ಕಂಪನಿಗಳ ಮೂವರು ಪಾಲುದಾರರು, ಮಾಲೀಕರ ವಿರುದ್ಧ ಆರಂಭಿಸಲಾದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

- Advertisement -

ಟೋಟಲ್ ಹೆಲ್ತ್ ಕೇರ್ ನ ಪಾಲುದಾರ ಸುಶೀಲ್ ಗೋಯೆಲ್, ಆಪ್ ಟೆಕ್ನಿಕ್ಸ್ ಅನ್ ಲಿಮಿಟೆಡ್ ಮಾಲೀಕ ಮೋನಿಶಾ ಡಾಂಗೆ ಮತ್ತು ಯುನಿಕಾರ್ನ್ ಮೆಡಿಟೆಕ್ ಮಾಲೀಕ ತ್ಯಾಗರಾಜನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ನಗರದ ಸೆಷನ್ಸ್ ನ್ಯಾಯಾಲಯದಲ್ಲಿ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದರು. ಅರ್ಜಿದಾರರಿಗೆ ಸಂಬಂಧಿಸಿದ ದೂರು ಸಂಪೂರ್ಣವಾಗಿ ಅಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ದಿನನಿತ್ಯ ತಯಾರಾಗುವ ಔಷಧದಲ್ಲಿ ಕಂಪನಿಯ ಅರ್ಜಿದಾರರ ಪಾತ್ರವೇನೂ ಇರುವುದಿಲ್ಲ, ಅರ್ಜಿದಾರರ ಯಾವುದೇ ಪಾತ್ರವಿಲ್ಲದೆ  ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿ ನಾಗ ಪ್ರಸನ್ನ ಆದೇಶಿಸಿದ್ದಾರೆ.

- Advertisement -

ಜುಲೈ 9,2019ರಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳಲ್ಲಿ ತದನಂತರ ಕಣ್ಣಿನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂಬುದರ ಆರೋಪಕ್ಕೆ ಸಂಬಂಧಿಸಿದಂತೆ ಜುಲೈ 12, 2020ರಲ್ಲಿ ಮಿಂಟೋ ಆಸ್ಪತ್ರೆ ಸೂಪರಿಟೆಂಡೆಂಟ್ ಅವರಿಂದ ಸಹಾಯಕ ಡ್ರಗ್ಸ್ ಕಂಟ್ರೋಲರ್ ಮಾಹಿತಿ ಪಡೆದಿದ್ದರು.



Join Whatsapp