ಜಮ್ಮು ಮತ್ತು ಕಾಶ್ಮೀರ| ನನ್ನನ್ನು ಕೆಣಕಲು ಸುಳ್ಳು ಆರೋಪ ಹೊರಿಸಲಾಗಿದೆ| ಫಾರೂಕ್ ಅಬ್ದುಲ್ಲಾ

Prasthutha|

ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಮಿಯಲ್ಲಿ ಫಾರೂಕ್ ಅವರ ನಿವಾಸವನ್ನು ನಿರ್ಮಿಸಲಾಗಿದೆ ಎಂಬ ಆಡಳಿತದ ಆರೋಪವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬುಧವಾರ ನಿರಾಕರಿಸಿದ್ದಾರೆ ಎಂದು ಎನ್. ಡಿ. ಟಿವಿ ವರದಿ ಮಾಡಿದೆ.

- Advertisement -

ಆಡಳಿತವು ಮಂಗಳವಾರ ಪ್ರಕಟವಾದ ರೋಶ್ನಿ ಕಾಯ್ದೆಯ ಫಲಾನುಭವಿಗಳ ಎರಡನೇ ಪಟ್ಟಿಯಲ್ಲಿ, ಅಬ್ದುಲ್ಲಾರ ಸಹೋದರಿ ಸುರೈಯ ಮ್ಯಾಟ್ಟೊ ಮತ್ತು ಮಗ ಒಮರ್ ಅಬ್ದುಲ್ಲಾ ಅವರನ್ನು ರಾಜ್ಯ ಭೂಮಿಯ “ಅತಿಕ್ರಮಣಕಾರರು” ಎಂದು ಬಣ್ಣಿಸಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

“1998ರಲ್ಲಿ ನನ್ನ ಮನೆಯನ್ನು ನಿರ್ಮಿಸಿದ ಪ್ರತಿಯೊಂದು ಇಂಚು ಭೂಮಿಯನ್ನು ನಾನು ಖರೀದಿಸಿದ್ದೇನೆ ನನ್ನನ್ನು ಕೆಣಕಲು ಸುಳ್ಳು ಆರೋಪವನ್ನು ಹೋರಿಸಲಾಗಿದೆ ಎಂದು ಫಾರೂಕ್ ಎನ್. ಡಿ. ಟಿವಿಗೆ ಹೇಳಿದ್ದಾರೆ.

- Advertisement -

ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ಮುಖಂಡ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಸಮ್ಮೇಳನದ ಮುಖಂಡರು ಸರಕಾರ ಮತ್ತು ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ, ರೋಶ್ನಿ ಕಾಯ್ದೆ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ನ್ಯಾಯಾಲಯವು ರೋಶ್ನಿ ಕಾಯ್ದೆಯನ್ನು “ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಸಮರ್ಥನೀಯವಲ್ಲ” ಎಂದು ಘೋಷಿಸಿತು.

Join Whatsapp