ತಾಲಿಬಾನ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಡ್ಯಾನಿಶ್ ಸಿದ್ದೀಕಿ ಪೋಷಕರು

Prasthutha|

ನವದೆಹಲಿ: ಭಾರತದ ಖ್ಯಾತ ಛಾಯಾಗ್ರಾಹಕ ಡ್ಯಾನಿಷ್ ಸಿದ್ದೀಕಿಯ ಹತ್ಯೆ ನಡೆಸಿದ ತಾಲಿಬಾನ್ ವಿರುದ್ಧ ಕಾನೂನು ಹೋರಾಟಕ್ಕೆ ಡ್ಯಾನಿಷ್ ಪೋಷಕರು ನಿರ್ಧರಿಸಿದ್ದಾರೆ. ಡ್ಯಾನಿಷ್ ಸಾವಿಗೆ ಕಾರಣರಾದ ತಾಲಿಬಾನ್ ಕಮಾಂಡರ್‌ಗಳು ಮತ್ತು ತಾಲಿಬಾನ್ ಸರಕಾರದ ನಾಯಕರನ್ನು ಶಿಕ್ಷೆಗೆ ಗುರಿಪಡಿಸಲು ಪೋಷಕರು ಕಾನೂನು ಹೋರಾಟ ನಡೆಸಲಿದ್ದಾರೆ.

- Advertisement -

ಅತೀ ಶೀಘ್ರದಲ್ಲೇ ಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟ ಆರಂಭಿಸುತ್ತೆವೆ ಎಂದು ಡ್ಯಾನಿಷ್ ಕುಟುಂಬ ಹೇಳಿದೆ. ಕಾನೂನು ಹೋರಾಟ ಯಾವ ರೀತಿಯದ್ದು ಎಂದು ಕುಟುಂಬ ಬಹಿರಂಗಪಡಿಸದಿದ್ದರೂ ತಾಲಿಬಾನ್ ವಿರುದ್ಧ ಡ್ಯಾನಿಷ್ ಕುಟುಂಬ ಅಂತರಾಷ್ಟ್ರೀಯ ಮೊರೆ ಹೋಗಲಿದೆ ಎನ್ನಲಾಗಿದೆ.

ಅಫ್ಗಾನಿಸ್ತಾನ ಸೇನೆ ಮತ್ತು ತಾಲಿಬಾನ್ ನಡುವಿನ ಯುದ್ಧವನ್ನು ವರದಿ ಮಾಡುತ್ತಿದ್ದ ಡ್ಯಾನಿಷ್ ಸಿದ್ದೀಕಿ ಅವರನ್ನು 2021ರ ಜುಲೈನಲ್ಲಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್‌ ನಲ್ಲಿ ಹತ್ಯೆಗೈಯ್ಯಲಾಗಿತ್ತು.



Join Whatsapp