ಬಳ್ಳಾರಿ: ಇಲ್ಲಿನ ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಮೂವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ.
ಬಳ್ಳಾರಿಯ ಕುಡತಿನಿ ಬಳಿಯ ಬಿಟಿಪಿಎಸ್ ಆಕ್ಸಿಜನ್ ಪ್ಲ್ಯಾಂಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಆಕ್ಸಿಜನ್ ಫಿಲ್ ಮಾಡುವ ವೇಳೆ ದುರ್ಘಟನೆ ಸಂಭವಿಸಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರ್ಮಿಕರ ಮೈಗೆಲ್ಲ ಹತ್ತಿಕೊಂಡಿದೆ.
ನಾಗಪುರದ ಓಜನ್ ಕಂಪನಿಯ ಇಂಜಿನಿಯರುಗಳಾದ ಪ್ರಶಾಂತ್, ಅಂಕುಶ್ , ಚಂದ್ರು ಗಾಯಗೊಂಡವರಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕಳುಹಿಸಿದೆ.