ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ನಾವು ಖಂಡಿಸುವುದಿಲ್ಲ: ಚೀನಾ

Prasthutha|

ಬೀಜಿಂಗ್: ಮಾಸ್ಕೋದೊಂದಿಗಿನ ಸಂಬಂಧ ಕೆಲವೊಂದು ಜಾಗತಿಕವಾದ ಕ್ಲಿಷ್ಟಕರ ದ್ವಿಪಕ್ಷೀಯ ಸಂಬಂಧ ಹೊಂದಿರುವುದಾಗಿ ತಿಳಿಸಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ರಷ್ಯಾ ನಮ್ಮ ಪ್ರಮುಖ ಕಾರ್ಯತಂತ್ರದ ಪಾಲುದಾರ ದೇಶವಾಗಿದೆ. ಅಂತಾರಾಷ್ಟ್ರೀಯ ಗಡಿ ವಿವಾದವು ಎಷ್ಟೇ ಅಪಾಯಕಾರಿಯಾಗಿದ್ದರೂ ಕೂಡಾ, ನಾವು ನಮ್ಮ ಕಾರ್ಯತಂತ್ರದ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇವೆ. ಚೀನಾ ಮತ್ತು ರಷ್ಯಾದ ಜತೆಗಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ರಷ್ಯಾ, ಚೀನಾದ ಸಂಬಂಧ ಹೊಸ ಅಧ್ಯಾಯ ಬರೆಯಲಿದೆ ಎಂದು ಚೀನಾದ ವಿದೇಶಾಂಗ ಸಚಿವ ಸೋಮವಾರ ತಿಳಿಸಿರುವುದಾಗಿ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಗೌರವ ಕೊಡಬೇಕು. ನಿರ್ಬಂಧ ಹೇರಿಕೆಯಿಂದ ಹೊಸ ಸಮಸ್ಯೆಯಗಳು ಸೃಷ್ಟಿಯಾಗುವ ಕಾರಣದಿಂದ ರಾಜತಾಂತ್ರಿಕತೆ ಮೂಲಕದ ಮಾತುಕತೆಯ ಪ್ರಕ್ರಿಯೆಗೆ ತೊಡಕಾಗಲಿದೆ ಎಂದು ಚೀನಾ ಹೇಳಿದೆ.



Join Whatsapp