ರವಿ ಚನ್ನಣ್ಣನವರ್ ವಿರುದ್ಧ ಸುದ್ದಿ ಪ್ರಕಟ: ನ್ಯಾಯಾಲಯದ ತಡೆಯಾಜ್ಞೆ ವಿಸ್ತರಣೆ

Prasthutha|

ಬೆಂಗಳೂರು: ತಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಕಟಿಸಬಾರದು ಎಂದು ಸುದ್ದಿ ಮಾಧ್ಯಮಗಳ ವಿರುದ್ಧ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ನ್ಯಾಯಾಲಯದಿಂದ ತಂದಿದ್ದ ಮಧ್ಯಂತರ ಪ್ರತಿಬಂಧಕಾಜ್ಞೆಯನ್ನು ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ವಿಸ್ತರಿಸಿದ್ದಾರೆ.

- Advertisement -

ಪ್ರತಿಬಂಧಕಾಜ್ಞೆಯನ್ನು ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಫೆ.11ರಂದು ಆದೇಶ ಹೊರಡಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ದಿನಪತ್ರಿಕೆಗಳು, ಸಂಜೆ ಪತ್ರಿಕೆಗಳು, ಸುದ್ದಿ ವಾಹಿನಿಗಳು ಸೇರಿದಂತೆ 37 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.

- Advertisement -

ಅರ್ಜಿಯ ವಿಚಾರಣೆ ನಡೆಸಿ ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿ ಜನವರಿ 14ರಂದು ಆದೇಶ ಹೊರಡಿಸಿದ್ದ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಈ ಸಂಬಂಧ ಫೆ. 1ಕ್ಕೆ ವಿಚಾರಣೆ ಮುಂದೂಡಿದ್ದರು.

ಆ ನಂತರ ವಿಚಾರಣೆಯು ಫೆ. 5 ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಲಾಗಿತ್ತು. ಫೆ.11ರಂದು ವಿಚಾರಣೆ ಬಳಿಕ ಇದೀಗ ಮಾರ್ಚ್ 14ರವರೆಗೆ ಪ್ರತಿಬಂಧಕಾಜ್ಞೆಯನ್ನು ವಿಸ್ತರಿಸಲಾಗಿದೆಯಲ್ಲದೆ ಅದೇ ದಿನಾಂಕಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ



Join Whatsapp