ಬೆಂಗಳೂರು: ಕಾಲೇಜು ಆವರಣದಲ್ಲಿ ಸ್ಕಾರ್ಫ್ – ಕೇಸರಿ ಶಾಲು ಸಂಘರ್ಷ ವಿವಿಧೆಡೆ ಹರಡುತ್ತಿದ್ದಂತೆ ಕೋಮು ಸಂಘರ್ಷ ತಪ್ಪಿಸಲು ರಾಜ್ಯದ ಎರಡು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸ್ಕಾರ್ಫ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರಾಕರಿಸಲಾಗಿದೆ. ಆದರೆ ಅವರಿಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಕೂರಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಪಾಠ ಕೇಳಲು ಅವಕಾಶ ನೀಡಲಾಗಿಲ್ಲ.
ಕಾಲೇಜು ಪರಿಸರದಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ವಿದ್ಯಾರ್ಥಿನಿಯರು ಸ್ಕಾರ್ಫ್ ತೆಗೆದ ನಂತರವೇ ಸಾಮಾನ್ಯ ತರಗತಿಗೆ ಹಾಜರಾಗಬಹುದು ಎಂದು ಪ್ರಾಂಶುಪಾಲ ರಾಮಕೃಷ್ಣ ಜಿ.ಜೆ ಪುನರುಚ್ಚರಿಸಿದ್ದಾರೆ. ಈ ಮಧ್ಯೆ ತರಗತಿಯಲ್ಲಿ ಸ್ಕಾರ್ಫ್ ತೆಗೆಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದ್ದಾರೆ.