ಸ್ನೇಹಿತನನ್ನು ಕೊಲೆಗೈದು ಪರಾರಿಯಾದ ವಿದೇಶಿ ಪ್ರಜೆ

Prasthutha|

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ತಲೆಯನ್ನು ಗೋಡೆಗೆ ಬಲವಾಗಿ ಗುದ್ದಿ ಆತನನ್ನು ಹತ್ಯೆ ಮಾಡಿರುವ ವಿದೇಶಿ ಪ್ರಜೆ ಪರಾರಿಯಾಗಿರುವ ಘಟನೆ ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರದಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಶಿವಕುಮಾರ್ (44) ಕೊಲೆಯಾದವರು. ವೆಸ್ಟ್ ಇಂಡಿಸ್ ಮೂಲದ ಬಾಬಿ ಕೃತ್ಯ ವೆಸಗಿ ಪರಾರಿಯಾಗಿದ್ದು ಆತನ ಪತ್ತೆಗೆ ಶೋಧ ನಡೆಸಲಾಗಿದೆ.
ಗಾರೆ ಕೆಲಸ ಮಾಡುತ್ತಿದ್ದ ಶಿವಕುಮಾರ್ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದು ಅವರ ವೆಸ್ಟ್ ಇಂಡಿಸ್ ಮೂಲದ ಬಾಬಿ ಕೂಡ ವಾಸವಿದ್ದು ನಿನ್ನೆ ರಾತ್ರಿ ವೇಳೆ ಇಬ್ಬರು ಕುಡಿದು ಗಲಾಟೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕ್ಷುಲಕ ಕಾರಣಕ್ಕೆ ಅವರನ್ನು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಾಬಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿರುವ ನಂದಗುಡಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp