ಅಶೋಕನ ನಾಮಫಲಕ ಕಳ್ಳತನ: ತನಿಖೆಗೆ ರೈತ ಸಂಘ, ಪ್ರಗತಿಪರ ಒಕ್ಕೂಟ ಒತ್ತಾಯ

Prasthutha|

ಮಸ್ಕಿ: ಸಾಮ್ರಾಟ್ ಅಶೋಕನಿಗೆ ಸಂಬಂಧಿಸಿದ ನಾಮಫಲಕ ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಾರ್ಯಾಲಯದ ವರೆಗೆ ಜಾಥಾ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

- Advertisement -

ಮಸ್ಕಿಯ ಮುದುಗಲ್ ಕ್ರಾಸ್ ಬಳಿಯಲ್ಲಿನ ಐತಿಹಾಸಿಕ ಅಶೋಕ ಶಿಲಾ ಶಾಸನದ ಸೂಚನಾ ನಾಮಫಲಕವನ್ನು ಜನವರಿ 27 ರಂದು ಹಾಗೂ ಮಸ್ಕಿ ಪಟ್ಟಣದ ಮುದುಗಲ್ ಕ್ರಾಸ್ ಹತ್ತಿರ ಪುರಾತತ್ವ ಇಲಾಖೆಯ ವತಿಯಿಂದ ಅಳವಡಿಸಿದ್ದ ದೇವನಾಂ ಪಿಯಾ ಸಾಮ್ರಾಟ ಅಶೋಕನ ಇತಿಹಾಸವನ್ನು ಸೂಚಿಸುವ ನಾಮಫಲಕ ರಾತ್ರೋ ರಾತ್ರಿ ಕಳ್ಳತನವಾಗಿದೆ. ಈ ಕೃತ್ಯ ವೆಸಗಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು.

ಅಶೋಕ ಶಿಲಾಶಾಸನ ಸೂಚಿಸುವ ನಾಮಫಲಕವನ್ನು ಕಳ್ಳತನ ಮಾಡಿರುವವರನ್ನು ಪತ್ತೆಹಚ್ಚಿ ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಶೋಕನ ಶಿಲಾ ಶಾಸನ ಸೂಚಿಸುವ ನಾಮಫಲಕವನ್ನು ಮರುಸ್ಥಾಪಿಸಬೇಕು. ಶಾಸನ ಇರುವ  ಸ್ಥಳವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಈ ಸ್ಥಳದಲ್ಲಿ ಬೌದ್ಧ ವಿಹಾರ ಸ್ಥಾಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

- Advertisement -

ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ತಾಯಪ್ಪ, ರೈತ ಸಂಘದ ಅಧ್ಯಕ್ಷ ಶಿವಕುಮಾರ, RTI ಸಾಮಾಜಿಕ ಕಾರ್ಯಕರ್ತರ ಎಸ್. ನಜೀರ್   ಮಸ್ಕಿ, ತಿಮ್ಮಣ್ಣ ಭೋವಿ, ಆಲಮಪ್ಪ ಹಿರೇ ಕಡಬೂರು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಅಶೋಕ ಮುರಾರಿ ಮಸ್ಕಿ, ಮಹಮ್ಮದ್ ಶೆಡ್ಮಿ, ಮಲ್ಲಪ್ಪ ಗೋನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Join Whatsapp