ಸಾಲ ವಾಪಸ್ ಕೇಳಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ| ಬಿಜೆಪಿ ಮುಖಂಡನ ಬಂಧನ

Prasthutha|

ಬೆಳಗಾವಿ: ಸಾಲವನ್ನು ವಾಪಸ್ ಕೇಳಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆಗೈದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿಯಾಗಿದ್ದಾನೆ.

ಬಡ್ಡಿ ವ್ಯವಹಾರ ಮಾಡಿಕೊಂಡು ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನೆಲೆಸಿದ್ದ ಶೈಲಾ ಸುಬೇದಾರ್, ತಾನು ಕೊಟ್ಟ 25 ಲಕ್ಷ ರೂ ಸಾಲವನ್ನು ವಾಪಸ್ ಕೇಳಿದ್ದಾಳೆ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಜ.16ರಂದು ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ನಡೆಸಿದ್ದರು.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕೇಶ್ವರದ 14ನೇ ವಾರ್ಡಿನ ಸದಸ್ಯ ಉಮೇಶ ಕಾಂಬಳೆಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.



Join Whatsapp