ಒಂದೇ ದಿನ ನಾಲ್ಕು ಬಾರಿ ಬಟ್ಟೆ ಬದಲಾಯಿಸಿದ ಮೋದಿ: ನೈಜ ‘ಫಕೀರ’ ಎಂದು ನೆಟ್ಟಿಗರಿಂದ ಟ್ರೊಲ್ !

Prasthutha|

ಉತ್ತರ ಪ್ರದೇಶ: ಪ್ರಧಾನಿ ಮೋದಿ ನಿನ್ನೆ ಒಂದೇ ದಿನದಲ್ಲಿ ನಾಲ್ಕು ಬಾರಿ ತಮ್ಮ ಬಟ್ಟೆ  ಬದಲಾಯಿಸಿದ್ದು, ನೆಟ್ಟಿಗರಿಂದ ವ್ಯಾಪಕ ಟ್ರೊಲ್ ಗೆ ಗುರಿಯಾಗಿದ್ದಾರೆ.

- Advertisement -

ವಾರಣಾಸಿಯ ಕಾಶಿ ವಿಶ್ವನಾಥ ಧಾಮ್ ನ ಕಾರಿಡಾರ್ ಉದ್ಘಾಟನೆ ಸಂದರ್ಭದಲ್ಲಿ ತಮ್ಮ ಸಂಪೂರ್ಣ ದಿನವನ್ನು ಕಾಶಿಯಲ್ಲೇ ಕಳೆದ ಪ್ರಧಾನಿ ಮೋದಿ, ಬರುವಾಗ ಒಂದು ಬಟ್ಟೆ, ನಂತರ ನದಿಯಲ್ಲಿ ಸ್ನಾನ ಮಾಡುವಾಗ ಒಂದು ಬಟ್ಟೆ, ನಂತರ ಆರತಿ ಮಾಡುವಾಗ ಮತ್ತೊಂದು ಬಟ್ಟೆ ಮತ್ತು ಎಲ್ಲ ಮುಗಿದ ನಂತರ ವಾಕ್ ಮಾಡುವಾಗ ಮತ್ತೊಂದು ಬಟ್ಟೆ ಧರಿಸಿ ಸುದ್ದಿಯಾಗಿದ್ದಾರೆ.



Join Whatsapp