ಮಲಯಾಳಂ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರ ನಿರ್ಧಾರ

Prasthutha|

ಕೇರಳ: ಮಲಯಾಳಂ ಚಿತ್ರರಂಗದ ನಿರ್ದೇಶಕ ಅಲಿ ಅಕ್ಬರ್ ತಾನು ಹಿಂದೂ ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

- Advertisement -

‘ನಾನು ಮತ್ತು ನನ್ನ ಹೆಂಡತಿ ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತೇವೆ. ಇನ್ನೆಂದೂ ನಾವು ಮುಸ್ಲಿಮರಾಗಿ ಮುಂದುವರಿಯುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಆದರೆ ಅದಕ್ಕೆ ಅವರು ಕೊಟ್ಟ ಕಾರಣ ಸೂಕ್ತವಾಗಿಲ್ಲ ಎನ್ನಲಾಗುತ್ತಿದೆ.

ಬಿಪಿನ್ ರಾವತ್ ಅವರ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಕೆಲವು ವಿಕೃತರು ನಗುವಿನ ಇಮೋಜಿ ಹಾಕಿದ್ದು ಮತ್ತು ಕೆಲವರು ಮುಸ್ಲಿಮರ ನಕಲಿ ಐಡಿ ಮೂಲಕ ದುರುದ್ದೇಶದಿಂದ ನಗುವಿನ ಇಮೋಜಿ ಹಾಕಿದ ಘಟನೆ ನಡೆದಿವೆ. ಕೇರಳದ ಬಿಜೆಪಿ ಅಧ್ಯಕ್ಷರೇ ಫೇಕ್ ಐಡಿಗಳ ನಗುವಿನ ಇಮೋಜಿಗಳು ಇರುವ ಸ್ಕೀನ್ ಶಾಟ್ ಷೇರ್ ಮಾಡಿ ಆನಂತರ ಡಿಲೀಟ್ ಮಾಡಿದ್ದರು. ದೇಶಾದ್ಯಂತ ಮುಸ್ಲಿಮರ ಹೆಸರಿನ ಫೇಕ್ ಐಡಿ ಮೂಲಕ ಬಿಪಿನ್ ರಾವತ್ ಮರಣಕ್ಕೆ ನಗುವಿನ ಇಮೋಜಿ ಹಾಕಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡಲು ವ್ಯವಸ್ಥಿತ ಷಡ್ಯಂತ್ರ ನಡೆದಿವೆ.

- Advertisement -

ಅಕ್ಬರ್ ಅಲಿ ತನ್ನ ಮತಾಂತರಕ್ಕೆ ಕೊಟ್ಟ ಕಾರಣ “ಮುಸ್ಲಿಮರು ಖುಷಿಯ ಎಮೋಜಿಗಳನ್ನು, ಕಮೆಂಟ್ ಮಾಡಿದ್ದನ್ನು ಖಂಡಿಸಿ” ಎಂದಾಗಿದೆ. ಇದಕ್ಕಾಗಿ ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ ಅಲಿ ಅಕ್ಬರ್ ತಿಳಿಸಿದ್ದಾರೆ.

‘ಹುಟ್ಟಿನಿಂದ ನಾನು ಪಡೆದ ಗುರುತನ್ನು ಇಂದು ತ್ಯಜಿಸುತ್ತಿದ್ದೇನೆ. ಇಂದಿನಿಂದ ನಾನು ಮುಸ್ಲಿಂ ಅಲ್ಲ. ಇಂದಿನಿಂದ ನಾನು ಭಾರತೀಯ. ಭಾರತದ ವಿರುದ್ಧ ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ ಜನರಿಗೆ ಇದೇ ನನ್ನ ಉತ್ತರ’ ಎಂದು ಅಲಿ ಅಕ್ಬರ್ ಹೇಳಿದ್ದಾರೆ. ಅಲಿ ಅಕ್ಬರ್ ಮಾಡಿರುವ ಈ ಪೋಸ್ಟ್ ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಕೆಲವು ಮುಸ್ಲಿಮರಿಂದ ಫೇಕ್ ಐಡಿ ಮೂಲಕ ಕೋಮುವಾದಿಗಳು ನಿಮ್ಮಂತಹವರನ್ನು ಮೋಸ ಮಾಡಿದ್ದಾರೆ. ಪಾಪ, ನಿಮಗೆ ಅದು ಅರ್ಥವಾಗುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ.

ಅಲಿ ಅಕ್ಬರ್ ವಿಡಿಯೋ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಫೇಸ್ ಬುಕ್ ನಿಂದ ಅದು ಕಾಣೆ ಆಗದೆ. ಬಳಿಕ ವಾಟ್ಸಪ್ ಮೂಲಕ ವೈರಲ್ ಆಗಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp