ಕರ್ನೂಲ್: ನವೆಂಬರ್ 28, 2021 ರಂದು ಆಂಧ್ರಪ್ರದೇಶದ ಆಡಳಿಯಾರೂಢ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್ತಿನ ಉಪಾಧ್ಯಕ್ಷೆಯಾಗಿ ಝಕಿಯಾ ಖಾನಮ್ ಅವರನ್ನು ಆಯ್ಕೆ ಮಾಡಿದೆ. ಪರಿಷತ್ತಿನ ಅಧ್ಯಕ್ಷ ಮತು ಉಪಾಧ್ಯಕ್ಷರ ನಿವೃತ್ತಿಯಿಂದಾಗಿ ತೆರವಾಗಿದ್ದ ಸ್ಥಾನಗಳಿಗೆ ಈ ಆಯ್ಕೆ ನಡೆದಿದೆ.
ಸದ್ಯ ವಿಧಾನ ಪರಿಷತ್ತಿನ ನಿರ್ಗಮನ ಅಧ್ಯಕ್ಷ ಶರೀಫ್ ಮುಹಮ್ಮದ್ ಅಹ್ಮದ್ ಅವರ ಸ್ಥಾನಕ್ಕೆ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದಿಂದ ಕೊಯ್ಯೆ ಮೊಹಸೇನು ರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಝಕಿಯಾ ಖಾನಮ್ ಅವರ ಆಯ್ಕೆಯೊಂದಿಗೆ ಮುಖ್ಯಮಂತ್ರಿ ವೈ.ಎಸ್. ಜಗಮೋಹನ್ ರೆಡ್ಡಿ ಸಂಪುಟದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಅಭ್ಯರ್ಥಿಗೆ ನೀಡಿದ 2 ನೇ ಉನ್ನತ ಹುದ್ದೆ ಇದಾಗಿದ್ದು, ಮೊದಲ ಸ್ಥಾನವನ್ನು ಅಮ್ಜದ್ ಬಾಷ ಬೇಪಾರಿ ಅವರಿಗೆ ಉಪ ಮುಖ್ಯಮಂತ್ರಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆಯನ್ನು ಸ್ಥಾನವನ್ನು ವಹಿಸಿದ್ದಾರೆ.
ವಿಧಾನ ಪರಿಷತ್ತಿನ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಝಕಿಯಾ ಖಾನಮ್, ತನ್ನ ಮೇಲೆ ನಂಬಿಕೆ ಇಟ್ಟು ಅಲ್ಪಸಂಖ್ಯಾತ ಮಹಿಳೆಗೆ ಈ ಮಹತ್ವದ ಹುದ್ದೆಯನ್ನು ನೀಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ರಾಜಕೀಯ ಮತ್ತು ಆರ್ಥಿಕವಾಗಿ ರಾಜ್ಯದಲ್ಲಿ ಮಹಿಳಾ ಸಬಲೀಕರಣದತ್ತ ರಾಜ್ಯ ಸರ್ಕಾರದ ಹೆಜ್ಜೆಯಾಗಿದೆ ಎಂದು ಖಾನಮ್ ತಿಳಿಸಿದರು.
ಝಕಿಯಾ ಅವರು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಭಾಷಣದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವುದಾಗಿ ತಿಳಿಸಿದರು. ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಅಮ್ಜದ್ ಬಾಷಾ, ಸಚಿವ ಪಾಮುಲ ಪುಷ್ಪಾ, ಸರ್ಕಾರದ ಮುಖ್ಯ ಸಚೇತಕ ಶ್ರೀಕಾಂತ್ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.