ನವದೆಹಲಿ: “750 ರೈತರು ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೃಷಿ ಕಾಯ್ದೆ ಹಿಂಪಡೆದುದರ ವಿಜಯೋತ್ಸವ ಆಚರಿಸಬೇಕೆ?” ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮುಂದುವರಿಯುವುದು ಎಂದು ಹಿಂದೆಯೇ ಹೇಳಿದ್ದಂತೆ ರೈತರು ಸಂಸತ್ ಅಧಿವೇಶನ ಆರಂಭದ ದಿನವೂ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಸರಕಾರವು ಇಲ್ಲಗೆ ರೈತರ ಪ್ರತಿಭಟನೆ ಕೊನೆಯಾಯಿತು ಎಂದು ಸರಕಾರವು ಎಣಿಸಬೇಕಾಗಿಲ್ಲ. ನಮ್ಮ ಹೋರಾಟವು ಖಚಿತವಾದ ಕನಿಷ್ಠ ಬೆಂಬಲ ಬೆಲೆಗಾಗಿ ಹೋರಾಟವನ್ನು ಮುಂದುವರಿಸುತ್ತದೆ ಎಂದು ಟಿಕಾಯತ್ ಹೇಳಿದರು.