ನವದೆಹಲಿ: ಏರ್’ಟೆಲ್, ವೊಡಾಪೋನ್-ಐಡಿಯಾ ಬಳಿಕ ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಯಾದ ಜಿಯೋ, ತನ್ನ ತಾರೀಫ್ ಯೋಜನೆಗಳ ದರವನ್ನು ಹೆಚ್ಚಿಸಿದೆ. ಏರಿಕೆಯಾದ ನೂತನ ದರವು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ಸದ್ಯ 75 ರುಪಾಯಿ ಪ್ರಾರಂಭಿಕ ಬೆಲೆಯ ಯೋಜನೆಯು ಡಿಸೆಂಬರ್ 1ರ ಬಳಿಕ 91 ರುಪಾಯಿ ಆಗಲಿದೆ. 129 ರುಪಾಯಿಯ ಯೋಜನೆಯು 155 ರುಪಾಯಿಗೆ ಏರಿಕೆಯಾಗಲಿದೆ. 28 ದಿನಗಳ ಅವಧಿ, ಪ್ರತನಿತ್ಯ 2 ಜಿಬಿ ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಹೊಂದಿರುವ ಯೋಜನೆಯ ದರವು ರು. 249ರಿಂದ 299 ರುಪಾಯಿ ಆಗಲಿದೆ .
84 ದಿನಗಳ ಅವಧಿ, ಪ್ರತನಿತ್ಯ 2 ಜಿಬಿ ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಹೊಂದಿರುವ ಯೋಜನೆಯ ದರವು ರು. 599 ರಿಂದ 719 ರುಪಾಯಿ ಆಗಲಿದೆ .