ಪ್ರಧಾನಿ ಮೋದಿ – ಸಿಎಂ ಯೋಗಿ ಹೆಗಲ ಮೇಲೆ ಕೈಹಾಕಿದ ವೈರಲ್ ಫೋಟೋ ನಾಟಕ ? ಕಾಂಗ್ರೆಸ್ ನಿಂದ ಹೀಗೊಂದು ಫ್ಯಾಕ್ಟ್ ಚೆಕ್ !

Prasthutha|

ನವದೆಹಲಿ: ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಹೆಗಲ ಮೇಲೆ ಕೈ ಹಾಕಿ ನಡೆಯುವ ಎರಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಫ್ಯಾಕ್ಟ್ ಚೆಕ್ ಮುಖಾಂತರ ಇಬ್ಬರ ನಾಟಕವನ್ನು ಬಯಳಿಗೆಲೆದಿದೆ. ಕ್ಯಾಂಡಿಡ್ ​​ನಂತೆ ಕಾಣುವ ಈ ಇಬ್ಬರ ಫೋಟೋಗಳು ಖಂಡಿತ ಕ್ಯಾಂಡಿಡ್ ಅಲ್ಲ. ಪಕ್ಕಾ ಪೋಸ್ ಎಂದು ಹೇಳಿ ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -

ಪ್ರಧಾನಿ ನರೇಂದ್ರ ಮೋದಿಯವರು ಲಖನೌಗೆ ಭೇಟಿ ನೀಡಿದ್ದ ವೇಳೆ ತೆಗೆದ ಫೋಟೋಗಳನ್ನು ಯೋಗಿ ಆದಿತ್ಯನಾಥ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಯಾವುದೋ ಆಳವಾದ ಚರ್ಚೆಯಲ್ಲಿ ತೊಡಗಿರುವಂಥ ಫೋಟೋಗಳು ಇದಾಗಿದ್ದು, ಮೋದಿ ಯೋಗಿಯ ಹೆಗಲ ಮೇಲೆ ಕೈಹಾಕಿ ನಿಂತಿರುವ ಫೋಟೊ ಸದ್ಯ ವ್ಯಂಗ್ಯಕ್ಕೆ ಕಾರಣವಾಗಿದೆ. ಹಂಚಿಕೊಂಡಿರುವ ಎರಡು ಫೋಟೋಗಳಲ್ಲಿ ವ್ಯತ್ಯಾಸ ತೋರಿಸಿರುವ ಕಾಂಗ್ರೆಸ್ ಎರಡೂ ಫೋಟೋಗಳು ಒಂದೇ ಬಾರಿ ತೆಗೆದಿದ್ದಾದರೆ, ಕ್ಯಾಂಡಿಡ್ ಆಗಿದ್ದರೆ ಹೀಗೇಕೆ ವಿಭಿನ್ನತೆ ಗೋಚರಿಸುತ್ತಿತ್ತು? ಪ್ರಧಾನಿ ಮೋದಿಯವರ ಉಡುಪಿನಲ್ಲೇಕೆ ಬದಲಾವಣೆ ಆಗುತ್ತಿತ್ತು ಎಂದು ಪ್ರಶ್ನಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಂಚಿಕೊಂಡಿರುವ ಫೋಟೊದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಒಂದು ಫೋಟೋದಲ್ಲಿ ಪ್ರಧಾನಿ ಮೋದಿ ಹೆಗಲಿಗೆ ಅಂಗೋಚಾ ಹಾಕಿದ್ದರೆ, ಇನ್ನೊಂದರಲ್ಲಿ ಶಾಲು ಹಾಕಿಕೊಂಡಿದ್ದಾರೆ. ಚರ್ಚೆಯಲ್ಲಿ ಇದು ಬದಲಿಸಲು ಹೇಗೆ ಸಾಧ್ಯ . ಎದುರಿನಿಂದ ತೆಗೆದ ಫೋಟೋದಲ್ಲಿ ಮೋದಿಯ ಮುಖದಲ್ಲಿ ಕಿರಿಕಿರಿ ಮತ್ತು ಭಯ ಎದ್ದು ಕಾಣುತ್ತಿದೆ. ಈ ಫೋಟೋದಿಂದ ಯೋಗಿಯವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶಿರಂತೆ ಹೇಳಿದ್ದಾರೆ.



Join Whatsapp