ತ್ರಿಪುರಾ ಹಿಂಸಾಚಾರ; ಬಂಧಿತ ಪತ್ರಕರ್ತರಿಗೆ ಜಾಮೀನು

Prasthutha|

ಅಗರ್ತಲಾ : ತ್ರಿಪುರ ಹಿಂಸಾಚಾರದ ಕುರಿತು ವರದಿ ಮಾಡಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಇಬ್ಬರು ಪತ್ರಕರ್ತರಿಗೆ ತ್ರಿಪುರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪತ್ರಕರ್ತೆಯರಾದ ಸಮೃದ್ಧಿ ಸಕುನಿಯಾ ಹಾಗೂ ಸ್ವರ್ಣ ಝಾ ಅವರಿಗೆ ಸೋಮವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -


ತ್ರಿಪುರಾ ಹಿಂಸಾಚಾರ ಕುರಿತ ವರದಿಗಾರಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ತ್ರಿಪುರಾ ಪೊಲೀಸರಿಂದ ಎಫ್ ಐಆರ್ ಹಾಕಿಸಲ್ಪಟ್ಟಿದ್ದ ಇಬ್ಬರು ಯುವ ಪತ್ರಕರ್ತೆಯರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದರು.



Join Whatsapp