ಮಲಾರ್ ಹೆಲ್ಪ್ ಲೈನ್ ಮಹಾಸಭೆ| ನೂತನ ಅಧ್ಯಕ್ಷರ ಆಯ್ಕೆ

Prasthutha|

►ಮಲಾರ್ ಹೆಲ್ಪ್ ಲೈನ್ ನಾಲ್ಕನೇ ಅವಧಿಯ ಅಧ್ಯಕ್ಷರಾಗಿ ಕಬೀರ್ ಮಲಾರ್ ಆಯ್ಕೆ

- Advertisement -

ಕೊಣಾಜೆ: ಮಲಾರ್ ಹೆಲ್ಪ್ ಲೈನ್ ಸಂಸ್ಥೆಯ ಮಹಾಸಭೆ ದಿನಾಂಕ 25/10/21 ರ ಸೋಮವಾರದಂದು ಜರುಗಿತು.

ಮೂರನೇ ವರ್ಷದ ಸಂಪೂರ್ಣ ಲೆಕ್ಕಾಚಾರ ಹಾಗೂ ಸಂಸ್ಥೆಯ ಸಮಾಜಸೇವೆಗಳನ್ನು ಕಾರ್ಯದರ್ಶಿ MK ಫಾರೂಕ್ ರವರು ಮಂಡಿಸಿದರು.ಶಮೀರ್ ಟಿಪ್ಪುನಗರ ಅವರು ಅಧ್ಯಕ್ಷೀಯ ನಿರ್ಗಮನ ಭಾಷಣ ಮಾಡಿದರು.

- Advertisement -


ಮಹಾಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸಮಾಜಸೇವಕ,ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನ್ಸಾರ್ ಇನೋಳಿಯವರು ಸಂಘಟನೆ,ನಾಯಕತ್ವ ಹಾಗೂ ಪರಿಪಾಲನೆ, ಜವಾಬ್ದಾರಿಗಳು ಎಂಬ ವಿಷಯದಲ್ಲಿ ಮಾರ್ಗದರ್ಶನ ನೀಡಿದರು.

ಚುನಾವಣಾ ಉಸ್ತುವಾರಿಯಾಗಿ ಆಗಮಿಸಿದ ಪಾವೂರು ಗ್ರಾಮ ಪಂಚಾಯತ್ ಮಾಜಿ‌ ಸದಸ್ಯರಾದ ಸಂಸ್ಥೆಯ ಮಾರ್ಗದರ್ಶಕರಾದ MP ಹಸನ್ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಫಾರೂಕ್ MK ಸ್ವಾಗತಿಸಿದರು. ಸಮದ್G ವಂದಿಸಿದರು.

ಮಲಾರ್ ಹೆಲ್ಪ್ ಲೈನ್ ನೂತನ ಸಾರಥಿಗಳು…
ಕಬೀರ್ ಮಲಾರ್- ಅಧ್ಯಕ್ಷರು
ಶಮೀರ್ ಟಿಪ್ಪುನಗರ- ಸಂಚಾಲಕರು
ಯಹ್ಯಾ- ಉಪಾಧ್ಯಕ್ಷರು
G ಸಮದ್- ಪ್ರಧಾನ ಕಾರ್ಯದರ್ಶಿ
ರಿಝ್ವಾನ್- ಕಾರ್ಯದರ್ಶಿ
MP ಫಾರೂಕ್- ಕೋಶಾಧಿಕಾರಿ
MP ಆಸಿಫ್,ಹನೀಫ್,MKಸಮದ್,ಮಿಸ್ಬಾಹ್‌, ಮುನ್ನ- ಕಾರ್ಯಕಾರಿ ಸಮಿತಿ ಸದಸ್ಯರು



Join Whatsapp