‘ದೇಶದಲ್ಲಿ ಕ್ರೈಸ್ತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದೆ’: ಸತ್ಯ ಶೋಧನಾ ವರದಿ

Prasthutha|

ಹೊಸದಿಲ್ಲಿ: ದೇಶಾದ್ಯಂತ ಕ್ರೈಸ್ತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಸತ್ಯ ಶೋಧನಾ ವರದಿಯೊಂದು ಹೇಳಿದೆ.

- Advertisement -

ಕಳೆದ 273 ದಿನಗಳಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು 305 ಹಿಂಸಾಚಾರದ ಘಟನೆಗಳು ವರದಿಯಾಗಿವೆ.
ಛತ್ತೀಸ್‌ಗಢ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ದೆಹಲಿ ಮತ್ತು ಕೇರಳದಲ್ಲಿ ಹೆಚ್ಚಿನ ಹಿಂಸಾಚಾರಗಳು ನಡೆದಿವೆ. 80 ಪ್ರಕರಣಗಳು ದಾಖಲಾದ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ದೌರ್ಜನ್ಯಗಳು ನಡೆದಿವೆ.

ಅನೇಕ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರಿಗೆ ಪ್ರಾರ್ಥನೆ ನಡೆಸಲು ಕೂಡ ಅನುಮತಿಸಲಾಗುವುದಿಲ್ಲ ಎಂದು ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಯುನೈಟೆಡ್ ಎಗೈನ್ಸ್ಟ್ ದಿ ಹೇಟ್, ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ ಎಂಬ ಸಂಘಟನೆಗಳು ನಡೆಸಿದ ‘ಕ್ರಿಶ್ಚಿಯನ್ನರು ಭಾರತದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ’ ಎಂಬ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

- Advertisement -

ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ.



Join Whatsapp