ಬೆಂಗಳೂರು : ನಗರದ ವಿವಿಧೆಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಶ್ರೀರಾಂಪುರ ರೌಡಿ ನವೀನ್ ನನ್ನು ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾಟನ್ ಪೇಟೆಯ ಬಂಧಿತ ರೌಡಿ ನವೀನ್ ಬಂಧಿತ ಆರೋಪಿಯಾಗಿದ್ದು ಈತನ ಜೊತೆಗೆ ಬೈಕ್ ಕಳವು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಅಪರಾಧ ಕೃತ್ಯವೊಂದರಲ್ಲಿ ಜೈಲು ಸೇರಿದ್ದ ಆರೋಪಿ ನವೀನ್ ಗೆ ಜೈಲಿನಲ್ಲಿದ್ದಾಗ ತಮಿಳುನಾಡು ವೇಲೂರು ಪ್ರಭು ಎಂಬಾತನ ಪರಿಚಯವಾಗಿತ್ತು.ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸ್ನೇಹಿತರಾಗಿದ್ದ ವೇಲೂರು ಪ್ರಭು ಮತ್ತು ನವೀನ್ ನಗರದಲ್ಲಿ ಬೈಕ್ ಕಳ್ಳತನ ದಂಧೆ ನಡೆಸುತ್ತಿದ್ದರು.ವೇಲೂರು ಪ್ರಭು ರಾಯಲ್ ಎನ್ ಫೀಲ್ಡ್ ಬೈಕ್ ಕಳವು ಮಾಡುವುದರಲ್ಲಿ ನಿಷ್ಣಾತನಾಗಿದ್ದನು.ಬಂಧಿತ ಆರೋಪಿಯಿಂದ 11 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಮತ್ತೊಬ್ಬ ಬೈಕ್ ಕಳ್ಳ ಸೆರೆ:
ಕೆಂಗೇರಿ, ಅಶೋಕ್ ನಗರ, ಕೋರಮಂಗಲ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ರೆಹಮತ್ ಅಲಿ ಬಂಧಿತ ಆರೋಪಿಯಾಗಿದ್ದು ಆತನಿಂದ 2 ಲಕ್ಷ 80 ಸಾವಿರ ಮೌಲ್ಯದ 4 ಬೈಕ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯು ಹಿಂದೆ ಡಕಾಯಿತಿ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿಯಿದೆ.
ಆತನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.