ಮಂಗಳೂರಿನಲ್ಲಿ ಶಂಕಿತ ನಿಫಾ ವೈರಸ್ ರೋಗಿ ಪತ್ತೆ !

Prasthutha|

ಮಂಗಳೂರು: ಮಂಗಳೂರಿನ ವ್ಯಕ್ತಿಯೊಬ್ಬರಲ್ಲಿ ನಿಫಾ ಸೋಂಕು ಪತ್ತೆಯಾಗಿದ್ದು, ಇವರ ಮಾದರಿ ಪಡೆದಿರುವ ಆರೋಗ್ಯ ಇಲಾಖೆ ಪರೀಕ್ಷೆಗೆ ಕಳಿಸಿದ್ದು, ಇಂದು ಅಥವಾ ನಾಳೆ ರಿಪೋರ್ಟ್ ಬರಲಿದೆ. ಸದ್ಯ ಶಂಕಿತ ನಿಫಾ ಸೋಂಕಿತ ವ್ಯಕ್ತಿಯನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.

- Advertisement -

ಈ ವ್ಯಕ್ತಿ ಗೋವಾ ಮೂಲದವರಾಗಿದ್ದು ಮಂಗಳೂರಿನಲ್ಲಿ ನಿಫಾ ಪರೀಕ್ಷೆಗೆ ಒಳಗಾಗಿದ್ದರು, ಕರಾವಳಿ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ. ರೋಗಿಯ ಪರೀಕ್ಷಾ ಇಂದು ಅಥವಾ ನಾಳೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ನೆರೆಯ ರಾಜ್ಯ ಕೇರಳದಲ್ಲಿ ಭಾರಿ ಆತಂಕ ಮೂಡಿಸಿರುವ ನಿಫಾ, ರಾಜ್ಯಕ್ಕೂ ಕಾಲಿಟ್ಟಿದೆಯಾ ಎನ್ನುವ ಅನುಮಾನ ಕಾಡುತ್ತಿದೆ.

ತಪಾಸಣೆಗೊಳಪಟ್ಟಿರುವ ವ್ಯಕ್ತಿ ಗೋವಾದಲ್ಲಿ ಆರ್​ಟಿ-ಪಿಸಿಆರ್​ ಕಿಟ್ ತಯಾರಿಸುವ ಲ್ಯಾಬ್​ ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್​ ಆಗಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖನಾಗಿದ್ದ ಇವರು, ನಿಫಾ ವೈರಸ್​ ಬಂದಿರಬಹುದೆಂಬ ಶಂಕೆ ಹಿನ್ನೆಲೆ ಟೆಸ್ಟ್ ಮಾಡಿಸಿದ್ದಾರೆ. ಗೋವಾದಿಂದ ಕಾರವಾರಕ್ಕೆ ಬಂದು, ಅಲ್ಲಿಂದ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ಬಂದಿದ್ದಾರೆ. ಇವರ ಮಾದರಿ ಪಡೆದಿರುವ ಆರೋಗ್ಯ ಇಲಾಖೆ ಪರೀಕ್ಷೆಗೆ ಕಳಿಸಿದ್ದು, ಇಂದು ಅಥವಾ ನಾಳೆ ರಿಪೋರ್ಟ್ ಬರಲಿದೆ ಎಂದು ತಿಳಿದು ಬಂದಿದೆ.



Join Whatsapp