ನನ್ನಲ್ಲಿ ಅರೇಬಿಕ್ ರಕ್ತವಿದೆ: ಮುಖೇಶ್ ಅಂಬಾನಿ

Prasthutha|

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಮ್ಮ ಮತ್ತು ಅರಬ್ ದೇಶದ ನಡುವಿನ ಸಂಬಂಧದ ಬಗ್ಗೆ ಮಾತನಾಡಿ “ನಾನು ಯೆಮೆನ್ ನಲ್ಲಿ ಜನಿಸಿದವನು, ಏಕೆಂದರೆ ನನ್ನ ತಂದೆ ಯುವಕರಾಗಿದ್ದಾಗ ಯೆಮೆನ್ ಗೆ ಆಗಮಿಸಿದ್ದರು.” ಎಂದಿದ್ದಾರೆ, ಅಲ್ಲದೆ ಇದೇ ವಿಚಾರವಾಗಿ ಮತ್ತೆ ಮುಂದುವರಿದು ತನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಕತಾರ್ ಎಕನಾಮಿಕ್ ಫೋರಂನಲ್ಲಿ ಹೇಳಿದರು.

- Advertisement -

“ನನ್ನ (ತಂದೆ ಧೀರೂಭಾಯಿ ಅಂಬಾನಿ) ಯಾವಾಗಲೂ ನನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳುತ್ತಿದ್ದರು” ಎಂದು ಮುಖೇಶ್ ಅಂಬಾನಿ ತಿಳಿಸಿದರು. “ಭಾರತ ಮತ್ತು ಎಲ್ಲಾ ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳ ಮಹತ್ವ ನನಗೆ ತಿಳಿದಿದೆ” ಎಂದು ಅವರು ಹೇಳಿದರು.

ಕತಾರ್ ನಲ್ಲಿ ಸುಮಾರು ಏಳು ಲಕ್ಷ ಭಾರತೀಯರಿದ್ದಾರೆ. ಅವರೆಲ್ಲರೂ ಭಾರತದಲ್ಲಿ ಕತಾರ್ ನ ವಕ್ತಾರರಾಗಿದ್ದಾರೆ. ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುಂಪಿನಲ್ಲಿ ಶೇಖಾ ಮೋಝಾ ಅವರೊಡನೆ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ನನ್ನ ಪತ್ನಿ ಅವರ ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಅಭಿಮಾನಿ, ಕತಾರ್ ರಾಜಕುಟುಂಬದಿಂದ ನಾವು ಕಲಿಯುವ ಮೂಲಕ, ಪ್ರೇರಣ ಪಡೆಯುವ ಮೂಲಕ ಭಾರತ ಹಾಗೂ ಕತಾರ್ ನಡುವೆ ಗಾಢ ಸಂಬಂಧ ಬೆಳೆಸಬಹುದು ಎಂದು ಅಂಬಾನಿ ಹೇಳೀದ್ದಾರೆ.

- Advertisement -

ಏಪ್ರಿಲ್ 19, 1957 ರಂದು ಮುಖೇಶ್ ಅಂಬಾನಿ ಯೆಮೆನ್ ನ ಅಡೆನ್ ನಲ್ಲಿ ಜನಿಸಿದರು. ಮುಖೇಶ್ ಅಂಬಾನಿ ಇಂದು 2,718 ಶತಕೋಟಿಗಿಂತ ಹೆಚ್ಚು ಆಸ್ತಿಯ ಒಡೆಯರಾಗಿದ್ದರೆ. ಅಮೆರಿಕದ ಟೈಮ್ ನಿಯತಕಾಲಿಕವು ಮುಖೇಶ್ ಅಂಬಾನಿಯನ್ನು 2019 ರ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಸೇರಿಸಿದೆ



Join Whatsapp