ರಫೇಲ್ ಡೀಲ್: ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ

Prasthutha|

►ಜೆಪಿಸಿ ತನಿಖೆಗೆ ಕಾಂಗ್ರೆಸ್ ಒತ್ತಾಯ

- Advertisement -

ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿಯ ಭ್ರಷ್ಟಾಚಾರದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಂಟಿ ಸಂಸದೀಯ ಸಮಿತಿ-ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಏಕೆ ಸಿದ್ಧವಿಲ್ಲ. ಅಪರಾಧ ಪ್ರಜ್ಞೆ, ಸ್ನೇಹಿತರನ್ನು ರಕ್ಷಿಸುವ ಪ್ರಯತ್ನ ಇತ್ಯಾದಿ ಕಾರಣದಿಂದ ಜೆಪಿಸಿ ತನಿಖೆಗೆ  ಒಪ್ಪಿಸುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸಂಸದೀಯ ಸಮಿತಿ ತನಿಖೆಗೇಕೆ ಮೋದಿ ಸರ್ಕಾರ ಸಿದ್ಧವಿಲ್ಲ ಎಂದು ಪ್ರಶ್ನಿಸಿ ಆನ್’ಲೈನ್ ಸಮೀಕ್ಷೆಯೊಂದನ್ನು ಆರಂಭಿಸಿದ್ದಾರೆ.

- Advertisement -

ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಅಪರಾಧ ಭಾವನೆ, ಸ್ನೇಹಿತರನ್ನು ಉಳಿಸುವುದು, ಜಂಟಿ ಸಂಸದೀಯ ಸಮಿತಿಯು ರಾಜ್ಯಸಭಾ ಸ್ಥಾನವನ್ನು ಬಯಸುವುದಿಲ್ಲ, ಮೇಲಿನ ಎಲ್ಲಾ ಎಂಬ ಆಯ್ಕೆಯನ್ನು ನೀಡಿದ್ದಾರೆ.

 2016ರಲ್ಲಿ ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವೆ ನಡೆದ ಸುಮಾರು 59000 ಕೋಟಿ ರೂ.ಮೊತ್ತದ  ಈ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪ ಕೇಳಿಬಂದಿತ್ತು .

ರಫೇಲ್ ಡೀಲ್ ಸಂಬಂಧ ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ರಫೇಲ್ ಡೀಲ್ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.



Join Whatsapp