ಪತ್ರಕರ್ತ ಆಸಿಫ್ ಖಾನ್ ರ ಟ್ವಿಟ್ಟರ್ ಖಾತೆ ಅಮಾನತು

Prasthutha|

ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆಸಿಫ್ ಖಾನ್ ಅವರ ಟ್ವಿಟ್ಟರ್ ಅಕೌಂಟ್ ಅನ್ನು ಅಮಾನತುಗೊಳಿಸಲಾಗಿದೆ.
ಭಾರತದಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದ್ವೇಷಾಪರಾಧಗಳನ್ನು ಬಹಿರಂಗಗೊಳಿಸುತ್ತಿದ್ದ ಆಸಿಫ್ ಖಾನ್ ಅವರ ಖಾತೆಯನ್ನು ಟ್ವಿಟ್ಟರ್ ಅಮಾನತುಗೊಳಿಸಿದೆ. ಈ ಕ್ರಮವು ಭಾರತದಲ್ಲಿ ಪ್ರಶ್ನಿಸುವ ಭಿನ್ನ ಧ್ವನಿಗಳನ್ನು ಸೆನ್ಸಾರ್ ಮಾಡುವ ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

- Advertisement -


80,000ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಆಸಿಫ್ @imMAK02 ಶುಕ್ರವಾರ ಬೆಳಿಗ್ಗೆ ತನ್ನ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತನ್ನ ಸ್ನೇಹಿತನ ಮೂಲಕ ತಿಳಿಸಿದ್ದಾರೆ.
ನಾನು ಸರಿಯಾದ ಮಾರ್ಗದಲ್ಲಿದ್ದೇನೆ ಎಂಬುದು ನನಗೆ ತಿಳಿಯಿತು ಎಂದು ಆಸಿಫ್ ಪ್ರತಿಕ್ರಿಯಿಸಿದ್ದಾರೆ.
ಅಮಾನತುಗೊಳಿಸುವ ಮೊದಲು ಕೊನೆಯ ಟ್ವೀಟ್ ನಲ್ಲಿ ಆಸಿಫ್ ಅವರು, ಬಲವಂತದ ಮತಾಂತರದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದನಾ ವಿರೋಧಿ ದಳ ಪೊಲೀಸರು ಉಮರ್ ಗೌತಮ್ ಎಂಬ ಮುಸ್ಲಿಂ ಪ್ರಬೋಧಕರನ್ನು ಬಂಧಿಸಿದ್ದನ್ನು ಟೀಕಿಸಿದ್ದರು.


“ಮೌಲಾನಾ ಉಮರ್ ಗೌತಮ್ ಇಸ್ಲಾಂ ಧರ್ಮವನ್ನು ಬೋಧಿಸುತ್ತಿದ್ದರೆ ಮತ್ತು ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುತ್ತಿದ್ದರೆ ಅವರು ತನ್ನ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ ಎಂದರ್ಥ. 80% ಹಿಂದೂ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಒಬ್ಬ ವ್ಯಕ್ತಿಯು 1000ಕ್ಕೂ ಜನರನ್ನು ಬಲವಂತವಾಗಿ ಅಥವಾ ಲಂಚದಿಂದ ಇಸ್ಲಾಂಗೆ ಪರಿವರ್ತಿಸಬಹುದು ಎಂದು ನೀವು ಭಾವಿಸುತ್ತೀರಾ? ” #StandwithUmarGautam ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಆಸಿಫ್ ಟ್ವೀಟ್ ಮಾಡಿದ್ದರು. ಇದು ಟ್ವಿಟರ್‌ನ ಕೆಲವು ವಲಯಗಳಲ್ಲಿ ಟ್ರೆಂಡ್ ಆಗಿತ್ತು.
“ಇದು ವಿಲಕ್ಷಣ, ನಾನು ಯಾವ ರೀತಿ ನಿಯಮ ಉಲ್ಲಂಘಿಸಿದ್ದೇನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಆಸಿಫ್ ಪ್ರತಿಕ್ರಿಯಿಸಿದ್ದಾರೆ.



Join Whatsapp